ಜಿಲ್ಲೆ

ಕನ್ನಡ ಪುನಶ್ಚೇತನ ಶಿಬಿರ

Dharwada - Basavaraj Idli

ಹುಬ್ಬಳ್ಳಿ: ಧಾರವಾಡ ಜಿಲ್ಲಾ ಕನ್ನಡ ಉಪನ್ಯಾಸಕರ ವೇದಿಕೆ ವತಿಯಿಂದ 2025-26ನೇ ಸಾಲಿನ ಕನ್ನಡ ಭಾಷಾ ಪುನಶ್ಚೇತನ ಶಿಬಿರವನ್ನು ಇಲ್ಲಿಯ ನವನಗರದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಗಸ್ಟ್ 12ರಂದು ಬೆಳಗ್ಗೆ 10ಕ್ಕೆ ಏರ್ಪಡಿಸಲಾಗಿದೆ.

ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಡಾ. ತೇಜಶ್ವಿನಿ ನಾರಾಯಣಕರ ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾ ಕನ್ನಡ ಉಪನ್ಯಾಸಕರ ವೇದಿಕೆ ಅಧ್ಯಕ್ಷ ಶ್ರೀಶೈಲಯ್ಯ ಬಿ. ಹಿರೇಮಠ ಉಪಸ್ಥಿತರಿರುವರು. ಪ್ರಭಾರಿ ಪ್ರಾಚಾರ್ಯ ವೈ.ಎಫ್. ಹೊಸಮನಿ ಅಧ್ಯಕ್ಷತೆ ವಹಿಸುವರು.

ಹಳಗನ್ನಡ ಸಾಹಿತ್ಯಾಭಿರುಚಿ ಬೆಳೆಸುವಲ್ಲಿ ಉಪನ್ಯಾಸಕರ ಪಾತ್ರ, ಪ್ರಶ್ನೆ ಪತ್ರಿಕೆ ಹಾಗೂ ಪರೀಕ್ಷೆ ತಯಾರಿ ಒಂದು ಅವಲೋಕನ ಇವುಗಳ ಬಗ್ಗೆ ಗೋಷ್ಠಿಗಳು ನಡೆಯಲಿವೆ. ಪಠ್ಯಪುಸ್ತಕ ಮತ್ತು ಪರೀಕ್ಷೆ ಕುರಿತು ಮುಕ್ತ ಚರ್ಚೆ ನಡೆಯಲಿದೆ.
ಸಂಪನ್ಮೂಲ ವ್ಯಕ್ತಿಗಳಾಗಿ ನಿವೃತ್ತ ಪ್ರಾಚಾರ್ಯ ವೈ.ಎಂ. ಯಾಕೊಳ್ಳಿ, ಡಾ. ಶಶಿಧರ ತೋಡಕರ ಪಾಲ್ಗೊಳ್ಳುವರು ಎಂದು ಪ್ರಕಟಣೆ ತಿಳಿಸಿದೆ.