ಜಿಲ್ಲೆ

ಕಣ್ಮನ ಸೆಳೆದ ಜಾನಪದ ಕಲಾವಾಹಿನಿ ಮೆರವಣಿಗೆ

ಬೆಲಹೊಂಗಲ: ತಾಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ಜಿಲ್ಲಾಡಳಿತ, ಕನ್ನಡ ಮತ್ತು ಸಂಸತಿ ಇಲಾಖೆ ವತಿಯಿಂದ ಶುಕ್ರವಾರ ನಡೆದ ವೀರರಾಣಿ ಬೆಳವಡಿ ಮಲ್ಲಮ್ಮ ಉತ್ಸವದ ಮೊದಲ ದಿನದ ಜಾನಪದ ಕಲಾವಾಹಿನಿ ಮೆರವಣಿಗೆ ನೋಡುಗರ ಗಮನ ಸೆಳೆಯಿತು.

ಹಣೆಗೆ ತಿಲಕ, ತಲೆಗೆ ಪೇಠ ತೊಟ್ಟು ಕಂಗೊಳಿಸಿದ ಯುವಕರು, ಊರಿನ ಹಿರಿಯರು, ಪೂರ್ಣಕುಂಭ ಹೊತ್ತು ಸಾಗಿದ ಸುಮಂಗಲೆಯರು ಮೆರವಣಿಗೆ ಆಕರ್ಷಣೆಯಾಗಿದ್ದರು.

ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮತ್ಯುಂಜಯ ಸ್ವಾಮೀಜಿ, ಶಾಸಕರಾದ ಮಹಾಂತೇಶ ಕೌಜಲಗಿ, ಬಾಬಾಸಾಹೇಬ ಪಾಟೀಲ ಉತ್ಸವಕ್ಕೆ ಚಾಲನೆ ನೀಡಿದರು.

ಶಿರಸಿ ತಾಲೂಕು ಸೋಂದಾ ಗ್ರಾಮದಿಂದ ಆಗಮಿಸಿದ ಮಲ್ಲಮ್ಮಳ ವಿಜಯ ಜ್ಯೋತಿಗೆ ಪೂಜೆ ಸಲ್ಲಿಸಿ ಸ್ವಾಗತಿಸಿದರು. ಬೆಳವಡಿ ಮಲ್ಲಮ್ಮ ವತ್ತದಲ್ಲಿ ಗ್ರಾಪಂ ಅಧ್ಯ ಚಂದ್ರಶೇಖರಯ್ಯ ಕಾರಿಮನಿ ಬೆಳವಡಿ ಸಂಸ್ಥಾನದ ಧ್ವಜಾರೋಹಣ ನೆರವೇರಿಸಿದರು.

ಗ್ರಾಪಂ ಉಪಾಧ್ಯೆ ಸಂಗೀತಾ ಕನೇಕರ, ಉಪವಿಭಾಗಾಧಿಕಾರಿ ಪ್ರಭಾವತಿ ಕೀರಪುರ, ಕನ್ನಡ ಮತ್ತು ಸಂಸತಿ ಇಲಾಖೆ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ತಹಸೀಲ್ದಾರ್​ ಹಣಮಂತ ಶಿರಹಟ್ಟಿ, ಡಿವೆಎಸ್ಪಿ ರವಿ ನಾಯಕ, ಆರೋಗ್ಯಾಧಿಕಾರಿ ಡಾ. ಎಸ್​.ಎಸ್​.ಸಿದ್ದಣ್ಣವರ, ಬಿಇಒ ಎ.ಎನ್​.ಪ್ಯಾಟಿ, ಸಿಪಿಐಗಳಾದ ಪಂಚಾರಿ ಸಾಲಿಮಠ, ಶಿವಾನಂದ ಗುಡಗನಟ್ಟಿ, ಸುಮಾ ಗೋರಾಬಾಳ, ಪಿಡಿಒ ಜಿ.ಐ.ಬರಗಿ, ಜಿಪಂ ಮಾಜಿ ಸದಸ್ಯರಾದ ಈರಣ್ಣ ಕರೀಕಟ್ಟಿ, ರೋಹಿಣಿ ಪಾಟೀಲ, ಪ್ರಕಾಶ ಹುಂಬಿ, ಮಲ್ಲಮ್ಮ ಸಹಕಾರಿ ಉಪಾಧ್ಯ ನಿಂಗಪ್ಪ ಕರೀಕಟ್ಟಿ, ನಿರ್ದೇಶಕ ಆರ್​.ಎಸ್​.ರೊಟ್ಟಯ್ಯನವರ, ಆಡಳಿತ ಮಂಡಳಿಯ ಬಸವರಾಜ ಬಳಿಗಾರ, ಆದರ್ಶ ಶಿಣ ಸಂಸ್ಥೆಯ ಅಯ್ಯನಗೌಡ ಪಾಟೀಲ, ಜೆಡಿಎಸ್​ ಯುವ ಟಕದ ಜಿಲ್ಲಾಧ್ಯ ಸುನೀಲ ವರ್ಣೇಕರ, ಗ್ರಾಪಂ ಸದಸ್ಯರಾದ ಬಸಯ್ಯ ವಿರಕ್ತಮಠ, ಬಸಪ್ಪ ದೇಗಾವಿ, ವಿಶ್ವನಾಥ ಕರೀಕಟ್ಟಿ, ಈರಪ್ಪ ತುರಾಯಿ, ಆನಂದ ಮುಪ್ಪಯ್ಯನವರಮಠ, ಗಜಾನಾನ ರಾಣೋಜಿ, ಈರನಗೌಡ ಪಾಟೀಲ, ಸಿದ್ದಪ್ಪ ನಂದಿಹಳ್ಳಿ, ಯಲ್ಲಪ್ಪ ಬಾರ್ಕಿ, ಮೆಲಾರ ತುರಾಯಿ, ರಾಜು ಬಿಸಲಳ್ಳಿ, ಬಸಪ್ಪ ನರೆಗಲ್ಲ, ಮಹಾಂತಕ್ಕ ಗುಡ್ಡದಮಠ, ಮಂಜುಳಾ ಮಟ್ಟಿ, ಸುಮಂಗಲಾ ಪರಮನಾಯಕರ, ರಿಯಾನಾಬೇಗಂ ದಿಲ್ಲುನಾಯಕ, ರೇಣುಕಾ ಕುರಿ, ಕೌಸರ ಸಂಗ್ರೇಶಕೊಪ್ಪ, ರೇಣುಕಾ ಗುಗ್ಗರಿ, ಸಾರಾಬಿ ಹಾದಿಮನಿ, ದುರ್ಗವ್ವ ಮಾದರ, ದುರ್ಗವ್ವ ಕಪರಿ, ಕೀರವ್ವ ಕರೀಕಟ್ಟಿ, ಬಾಳವ್ವ ಅಬ್ಬಾರ ಇತರರು ಇದ್ದರು.

ಮೆರಗು ತಂದ ಕಲಾ ತಂಡಗಳು: ಗ್ರಾಮದ ಎಲ್ಲ ಮನೆಗಳ ಎದುರಿನ ರಸ್ತೆಯುದ್ದಕ್ಕೂ ಬಣ್ಣಬಣ್ಣದ ರಂಗೋಲಿ ಚಿತ್ತಾರ ಬಿಡಿಸಲಾಗಿತ್ತು. ಕಲಾ ತಂಡಗಳ ಮೆರವಣಿಗೆಯೊಂದಿಗೆ ಸಾಗಿದ ರಾಣಿ ಮಲ್ಲಮ್ಮಳ ವೀರಜ್ಯೋತಿಗೆ ಮಹಿಳೆಯರು ಮಕ್ಕಳು ಪೂಜೆ ಸಲ್ಲಿಸಿ ಆರತಿ ಬೆಳಗಿ ಕೈಮುಗಿದು ಪ್ರಾರ್ಥಿಸಿದರು. ಮೆರವಣಿಗೆಯಲ್ಲಿ ಪಾಲ್ಗೊಂಡವರಿಗೆ ಸಮಾಜ ಸೇವಕ ವಿಜಯ ಬಿಸಲೊಳ್ಳಿ ಮಜ್ಜಿಗೆ ವ್ಯವಸ್ಥೆ ಮಾಡಿದ್ದರು.

ಪುರವಂತಿಕೆ ಕಲಾ ಮೇಳ, ಡೊಳ್ಳು ಕುಣಿತ, ಮಹಿಳಾ ಡೊಳ್ಳು ಕುಣಿತ, ಜಗ್ಗಲಗಿ ತಂಡ, ಸಂಬಳ ವಾದನ, ಹಲಗೆ ವಾದನ, ಡೋಲ್​ ಪಥಕ್​, ಕರಬಲ್​ ಕುಣಿತ, ಕರಡಿ ಮಜಲು ಮತ್ತು ಜಾಂಝ್​ ಪಥಕ್​, ಸಿ.ಎಸ್​.ಲೋಕೇಶ ವೀರ ಹುನುಮಾನ ಗೊಂಬೆ ರೂಪಕದಲ್ಲಿ ಗಮನ ಸೆಳೆದರು. ವೀರಗಾಸೆ, ಅಗೋರಿ, ತಮಟೆ ವಾದನ, ಪೂಜಾ ಕುಣಿತ, ಕಂಸಾಳೆ ಕುಣಿತ ಉತ್ಸವದ ಕಳೆ ಹೆಚ್ಚಿಸಿದವು. ಬೆಳವಡಿಯ ಈಶಪ್ರಭು ಶಿಣ ಸಂಸ್ಥೆಯ ಶಾಲೆಯ ವಿದ್ಯಾರ್ಥಿಗಳು ಬೆಳವಡಿ ಮಲ್ಲಮ್ಮ ಮತ್ತು ರಾಜಾಈಶಪ್ರಭು ರೂಪಕ ಮತ್ತು ಮಹಿಳಾ ಸೈನ್ಯದ ವೇಷಭೂಷಣದಲ್ಲಿ ಮಿಂಚಿದರು.