ವಿಟ್ಲ: ಕಣಿಯೂರು ಶ್ರೀ ಚಾಮುಂಡೇಶ್ವರಿ ದೇವಿ ಕ್ಷೇತ್ರದಲ್ಲಿ ಶ್ರೀ ಚಾಮುಂಡೇಶ್ವರಿ ಮಾತೃ ಮಂಡಳಿ ಆಶ್ರಯದಲ್ಲಿ ಶ್ರೀ ಮಹಾಬಲೇಶ್ವರ ಸ್ವಾಮೀಜಿ ಮಾರ್ಗದರ್ಶನದಲ್ಲಿ ಶ್ರೀ ವರಮಹಾಲಕ್ಷ್ಮಿದೇವಿ ವ್ರತ ಪೂಜೆ ನಡೆಯಿತು.
ಕ್ಷೇತ್ರದಲ್ಲಿ ಶ್ರೀ ಮಹಾಬಲೇಶ್ವರ ಸ್ವಾಮೀಜಿ ಮಾತನಾಡಿ, ಆತ್ಮನೆಂದರೆ ಪರಮಾತ್ಮ. ಧರ್ಮ, ಸೇವೆ, ನೀತಿಯುಕ್ತ ಬದುಕು ಮಾತ್ರ ಅಮರತ್ವ ಪಡೆಯುತ್ತದೆ. ಮಾನವ ಮಾಧವನಾಗುವ ತತ್ವದ ಅರಿವಿದ್ದಾಗ, ಆತ್ಮನೊಂದಿಗೆ ಅನುಸಂಧಾನ ಮಾಡಿಕೊಂಡಾಗ ನಿಜ ಆನಂದ ಪಡೆಯಲು ಸಾಧ್ಯ ಎಂದು ತಿಳಿಸಿದರು.
ಶ್ರೀಕ್ಷೇತ್ರದಲ್ಲಿ ಸೆ.೨೨ರಿಂದ ೩೦ರವರೆಗೆ ನಡೆಯುವ ನವರಾತ್ರಿ ಮಹೋತ್ಸವದ ಆಮಂತ್ರಣ ಪತ್ರಿಕೆ ಅನಾವರಣಗೊಳಿಸಲಾಯಿತು. ಅರ್ಚಕರಾದ ಈಶ್ವರ ಭಟ್, ಮಹೇಶ್ ಭಟ್, ಶ್ರೀ ಚಾಮುಂಡೇಶ್ವರಿ ದೇವಿ ಟ್ರಸ್ಟ್ ಕಾರ್ಯದರ್ಶಿ ಚಂದ್ರಶೇಖರ್ ಕಣಿಯೂರು, ನೋಣಯ್ಯ ಪೂಜಾರಿ ಸಣ್ಣಗುತ್ತು, ಮಾತೃ ಮಂಡಳಿ ಅಧ್ಯಕ್ಷೆ ಸುಜಾತ ಭಾಗವಹಿಸಿದ್ದರು. ರೇಣುಕಾ ಕಣಿಯೂರು ಕಾರ್ಯಕ್ರಮ ನಿರೂಪಿಸಿದರು.