ಮಡಿಕೇರಿ:
ಶ್ರೀ ಕ್ಷೇತ್ರ ಭಾಗಮಂಡಲ ಮತ್ತು ತಲಕಾವೇರಿಯಲ್ಲಿ ಜಾತ್ರೆ ಸಂದರ್ಭ 18 ಲಕ್ಷ ರೂ. ಕಾಣಿಕೆ ಸಂಗ್ರಹ ಆಗಿದೆ. ಅ. 17ರಂದು ಕಾವೇರಿ ಉಗಮ ಸ್ಥಾನ ತಲಕಾವೇರಿಯಲ್ಲಿ ಸಂಭವಿಸಿದ ತೀರ್ಥೋದ್ಭವ ನಂತರ ತ್ರಿವೇಣಿ ಸಂಗಮ ಕ್ಷೇತ್ರ ಭಾಗಮಂಡಲದಲ್ಲಿ 1 ತಿಂಗಳು ಅವಧಿಯ ತುಲಾಸಂಕ್ರಮಣ ಜಾತ್ರೆ ಆರಂಭವಾಗಿದ್ದು, ಜಾತ್ರೆ ಶುರುವಾದ ನಂತರ ಬುಧವಾರ (ಅ.29) ನಡೆಸಿದ ಪ್ರಥಮ ಹುಂಡಿ ಎಣಿಕೆಯಲ್ಲಿ ಸೆ.29ರಿಂದ ಅ. 29ರ ತನಕದ ಅವಧಿಗೆ ಒಟ್ಟು ?18,05,000 ಲಕ್ಷ ರೂ. ಕಾಣಿಕೆ ಬಂದಿದೆ.
ಬುಧವಾರ ಬೆಳಗ್ಗೆ 8 ಗಂಟೆಯಿAದ ಭಾಗಮಂಡಲ ಕೆನರಾ ಬ್ಯಾಂಕ್ ಸಿಬ್ಬಂದಿ, ಭಾಗಮಂಡಲ ಆರಕ್ಷಕ ಠಾಣಾ ಸಿಬ್ಬಂದಿ, ದೇವಾಲಯದ ಕಾರ್ಯನಿರ್ವಾಹಣಾಧಿಕಾರಿ, ತಕ್ಕಮುಖ್ಯಸ್ಥರು, ಸಿಬ್ಬಂದಿ, ಸ್ವಯಂ ಸೇವಕರು ಹಾಗೂ ಭಾಗಮಂಡಲ ಕಂದಾಯ ಇಲಾಖೆ ಸಿಬ್ಬಂದಿಎಣಿಕೆ ಕಾರ್ಯದಲ್ಲಿ ಪಾಲ್ಗೊಂಡಿದ್ದರು. ಎಣಿಕೆ ಕಾರ್ಯವನ್ನು ಸಂಪೂರ್ಣ ವೀಡಿಯೋ ಚಿತ್ರೀಕರಣ ಮಾಡಿಕೊಳ್ಳಲಾಯಿತು.
ಶ್ರೀ ತಲಕಾವೇರಿ ದೇವಾಲಯದಲ್ಲಿ 7,27,389, ಶ್ರೀ ಭಗಂಡೇಶ್ವರ ದೇವಾಲಯದಲ್ಲಿ 5,44,333, ಅನ್ನ ಸಂತರ್ಪಣಾ ನಿಧಿ 2,52,867 ಹಾಗೂ ಇ-ಹುಂಡಿಯಲ್ಲಿ 2,80,411 ರೂ. ಸಂಗ್ರಹ ಆಗಿದೆ ಎಂದು ದೇವಾಲಯ ಇಒ ಚಂದ್ರಶೇಖರ ಮಾಹಿತಿ ನೀಡಿದ್ದಾರೆ.