ಕಾನಹೊಸಹಳ್ಳಿ: ಸಾಮಾಜಿಕ ಹೊಣೆಗಾರಿಕೆ ಎಲ್ಲರ ಕರ್ತವ್ಯ. ಪ್ರತಿಯೊಬ್ಬರೂ ರಕ್ತದಾನ ಮಾಡುವ ಮೂಲಕ ಮತ್ತೊಬ್ಬರ ಜೀವ ಉಳಿಸಬೇಕು ಎಂದುಗ್ರಾಪಂ ಅಧ್ಯಕ್ಷ ಎ.ಸಿ.ಚೇತನ್ ಹೇಳಿದರು.
ಇಲ್ಲಿನ ಗ್ರಾಪಂ ಕಚೇರಿ ಆವರಣದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ವಿಜಯನಗರದ ವಾಸಂತಿ ದೇವಿ ಬಲ್ಡೋಟ ರಕ್ತ ನಿಧಿ ಕೇಂದ್ರದಿಂದ ಮಂಗಳವಾರ ಆಯೋಜಿಸಿದ್ದ ಉಚಿತ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಗ್ರಾಮೀಣ ಭಾಗದ ಯುವಕರಲ್ಲಿ ರಕ್ತದಾನ ಮಾಡಲು ಅರಿವು ಮೂಡಿಸುವ ಕೆಲಸ ಆರೋಗ್ಯ ಇಲಾಖೆ ಸಿಬ್ಬಂದಿ ಮಾಡಬೇಕು. ಅಪಘಾತದಂತಹ ತುರ್ತುಸ್ಥಿತಿಯಲ್ಲಿ ಯುವಕರು ಮುಂದೆ ಬಂದು ರಕ್ತದಾನ ಮಾಡಬೇಕು ಎಂದರು.
ಪಿಎಚ್‌ಸಿ ವೈದ್ಯಾಧಿಕಾರಿ ಡಾ.ವಿಶ್ವನಾಥ ಮಾತನಾಡಿ, ರಕ್ತದಾನದಿಂದ ಕೊಬ್ಬಿನಾಂಶ ಕಡಿಮೆಯಾಗುವುದಲ್ಲದೆ, ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆಗಳು ಶೇ.80 ನಿವಾರಣೆಯಾಗಲಿವೆ ಎಂದು ತಿಳಿಸಿದರು.
30ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದರು. ಪಿಡಿಒ ಬಸಮ್ಮ ಬಿ, ಉಪಾಧ್ಯಕ್ಷೆ ನೇತ್ರಾವತಿ, ದಂತ ವೈದ್ಯೆ ಪಾರ್ವತಿ, ವಾಸಂತಿ ದೇವಿ ರಕ್ತನಿಧಿಯ ಗಣೇಶ್, ಮುಖಂಡರಾದ ಎಚ್.ಬಿ.ಸತೀಶ್, ಸಿಬ್ಬಂದಿ ಸುಪ್ರಿಯಾ, ರಾಘವರೆಡ್ಡಿ ಸೋಮಶೇಖರ, ಪ್ರಸಾದ, ಸುರೇಶ್, ಸುಧಾ, ಸವಿತಾ, ರೇಖಾ ಇತರರಿದ್ದರು.