ಜಿಲ್ಲೆ

ಕಾಣೆಯಾದವರ ಪತ್ತೆಗೆ ಮನವಿ

Mangaluru - Shravan Kumar Nala

ಮಂಗಳೂರು: ನಗರದ ಬೆಂಗ್ರೆ ನಿವಾಸಿ ಅಬ್ದುಲ್ ಹಮೀದ್ ಮುಝೈನ್ (16 ವರ್ಷ) ಎಂಬವರು ಮೊದಲ ವರ್ಷದ ಪಿ.ಯು.ಸಿ. ಪರೀಕ್ಷೆ ಮುಗಿಸಿ ಮನೆಯಲ್ಲಿದ್ದವರು. ಮಾ.6 ರಂದು ಬೆಂಗ್ರೆಯ ಮಸೀದಿಗೆಂದು ಹೋದವರು ಮರಳಿ ಬಾರದೇ ಕಾಣೆಯಾಗಿದ್ದಾರೆ. 5 ಅಡಿ ಎತ್ತರ, ಗೋಧಿ ಮೈ ಬಣ್ಣ, ಚಿಗುರು ಮೀಸೆ, ಕಪ್ಪು ತಲೆ ಕೂದಲು, ಎಡ ಕಿವಿಯ ಬಳಿ ಕಪ್ಪು ಮಚ್ಚೆ ಹೊಂದಿರುತ್ತಾರೆ. ಕಾಣೆಯಾದ ದಿನ ಹಸಿರು ಬಣ್ಣದ ಟಿ ಶರ್ಟ್, ಬಿಳಿ ಬಣ್ಣದ ಪ್ಯಾಂಟು ಧರಿಸಿದ್ದರು. ಕನ್ನಡ, ಇಂಗ್ಲೀಷ್, ಬ್ಯಾರಿ ಭಾಷೆ ಮಾತನಾಡುತ್ತಾರೆ. ಕಾಣೆಯಾದವರು ಪತ್ತೆಯಾದಲ್ಲಿ ಪಣಂಬೂರು ಪೊಲೀಸ್ ಠಾಣೆ ಸಂಪರ್ಕಿಸುವಂತೆ ಠಾಣಾ ಪ್ರಕಟಣೆ ತಿಳಿಸಿದೆ.