ಜಿಲ್ಲೆ

ಹಬ್ಬನಘಟ್ಟ ಗ್ರಾಪಂಗೆ ಅವಿರೋಧ ಆಯ್ಕೆ

ಎ. ಆರ್. ರಘುರಾಮ

ಅರಸೀಕೆರೆ ಗ್ರಾಮಾಂತರ : ಹಬ್ಬನಘಟ್ಟ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ವಸಂತಕುಮಾರಿ ಅವಿರೋಧ ಆಯ್ಕೆಯಾಗಿದ್ದಾರೆ.

ನಿಕಟಪೂರ್ವ ಅಧ್ಯಕ್ಷ ಚಂದ್ರಶೇಖರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದರಿಂದ ಗುರುವಾರ ಚುನಾವಣೆ

ನಿಗದಿಯಾಗಿತ್ತು. ವಸಂತಕುಮಾರಿ ಹೊರತುಪಡಿಸಿ ಉಳಿದ ಯಾರೂ ನಾಮಪತ್ರ ಸಲ್ಲಿಸದ ಕಾರಣ ಅವಿರೋಧ ಆಯ್ಕೆ ಘೋಷಣೆ ಮಾಡಲಾಯಿತು. ನಂತರ ಮಾತನಾಡಿದ ವಸಂತಕುಮಾರಿ, ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ

ಗ್ರಾಮಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಶ್ರಮಿಸುವೆ ಎಂದರು. ನಿಕಟಪೂರ್ವ ಅಧ್ಯಕ್ಷ ಚಂದ್ರಶೇಖರ್, ಉಪಾಧ್ಯಕ್ಷೆ ಸರೋಜಮ್ಮ, ಸದಸ್ಯರಾದ ರಾಜೇಶ್, ಶಿವಕುಮಾರ್, ಸುರೇಶ್, ಅರುಣ್ ಕುಮಾರ, ಪಿಡಿಒ ಪ್ರವೀಣ ಇತರರು ಉಪಸ್ಥಿತರಿದ್ದರು.