ವಿಜಯಪುರದಲ್ಲಿ ಹಮ್ಮಿಕೊಂಡಿದ್ದ ಶಿವಾನುಭವ ಗೋಷ್ಠಿಯಲ್ಲಿ ಡಾ. ಮಲ್ಲಿಕಾರ್ಜುನ ಮೇತ್ರಿ ಮಾತನಾಡಿದರು. ವಿ.ಸಿ. ನಾಗಠಾಣ, ಎಂ.ಜಿ. ಯಾದವಾಡ, ಅಪ್ಪಾಸಾಹೇಬ ಕೋರಿ ಮತ್ತಿತರರಿದ್ದಾರೆ. 
ಜಿಲ್ಲೆ

ಲೋಕದ ಅಂಕುಡೊಂಕು ತಿದ್ದಿದ ಕನಕರು

ವಿಜಯಪುರ: ಕನಕದಾಸರು ತಮ್ಮ ಕನ್ನಡ ಸಾಹಿತ್ಯದ ಮೂಲಕ ಸಮಾಜದಲ್ಲಿರುವ ಜಾತಿ ವ್ಯವಸ್ಥೆ ವಿರುದ್ಧ ಶ್ರಮಿಸಿದ ಮಹಾನ್ ಸಂತರು ಎಂದು ಉಪನ್ಯಾಸಕ ಡಾ. ಮಲ್ಲಿಕಾರ್ಜುನ ಮೇತ್ರಿ ಹೇಳಿದರು.

ನಗರದ ಅಖಿಲ ಭಾರತ ವೀರಶೈವ ಲಿಂಗಾಯತ ಸಭಾ ಭವನದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಶಿವಾನುಭವ ಗೋಷ್ಠಿಯಲ್ಲಿ ಕನಕದಾಸರ ಬದುಕು ಮತ್ತು ಅನುಭಾವ ಕುರಿತು ಉಪನ್ಯಾಸ ನೀಡಿದ ಅವರು, ಕನಕದಾಸರು 16 ನೇ ಶತಮಾನದಲ್ಲಿ ಹರಿ ನಾಮಸ್ಮರಣೆಯನ್ನೇ ಜೀವನದ ಉಸಿರಾಗಿಸಿಕೊಂದ್ದರು ಎಂದರು.

ಬಸವಾದಿ ಶರಣರ ನೆಲೆ ಪ್ರಭಾವ, ಕಾರ್ಮಿಕ ನೆಲೆಯ ಚಿಂತನೆ, ವಚನ ಸಾಹಿತ್ಯದ ಮಾರ್ಗದಲ್ಲಿ ನಡೆದು ವಿಜಯನಗರದ ಸಾಮ್ರಾಜ್ಯದಲ್ಲಿ ಸಂಚರಿಸಿದರು. ಅಲ್ಲದೆ, ಸ್ವಂತ ಕಾವ್ಯಗಳನ್ನು ರಚಿಸುತ್ತ ಸಮಾಜದ ಅಂಕುಡೊಂಕುಗಳನ್ನು ತಿದ್ದುವ ಮೂಲಕ ಜನರನ್ನು ಜಾಗೃತಿಗೊಳಿಸಿದರು. ಕನಕದಾಸರು 316 ಕೀರ್ತನೆಗಳೆಲ್ಲವೂ ಕೂಡ ಆತ್ಮಶುದ್ಧಿಗಾಗಿ, ಶ್ರೇಷ್ಠ ಕಾಯಕ ಚಿಂತನೆಗಾಗಿ ರಚಿತವಾಗಿವೆ ಎಂದರು.

ಜಿಲ್ಲಾ ಘಟಕದ ಅಧ್ಯಕ್ಷ ವಿ.ಸಿ. ನಾಗಠಾಣ ಮಾತನಾಡಿ ಕನಕದಾಸರು ದಾಸ ಸಾಹಿತ್ಯದ ಅಶ್ವಿನಿ ದೇವತೆಗಳು ಎಂದೇ ಹೆಸರಾದವರು ಎಂದರು.

ಸುವರ್ಣ ಕರ್ನಾಟಕ ಪ್ರಶಸ್ತಿ ಪಡೆದ ಸಮಾಜ ಸೇವಕಿ ಮಲ್ಲಮ್ಮ ಯಾಳವಾರ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದ ಸುರೇಶ ಗೊಣಸಗಿ, ಸಿನೆಟ್ ಸದಸ್ಯರಾಗಿ ಆಯ್ಕೆಯಾದ ಪಾರ್ವತಿ ಗೊಣಸಗಿ ಅವರನ್ನು ಸನ್ಮಾನಿಸಲಾಯಿತು.

ಎಂ.ಜಿ. ಯಾದವಾಡ, ಅಪ್ಪಾಸಾಹೇಬ ಕೋರಿ, ಜ್ಯೋತಿ ಬಾಗಲಕೋಟ, ಬಸವರಾಜ ಒಂಟಗೂಡಿ, ಬಿ.ಟಿ. ಈಶ್ವರಗೊಂಡ, ಕಾಶೀನಾಥ ಅಣೆಪ್ಪನವರ, ಡಾ. ವಿ.ಡಿ. ಐಹೊಳ್ಳಿ, ಸಹದೇವ ನಾಡಗೌಡರ, ಗಂಗಾಧರ ಸಾಲಕ್ಕಿ, ಪರಶುರಾಮ ಪೋಳ, ಡಾ. ಅಮೀರುದ್ಧಿನ ಖಾಜಿ, ರಾಜೇಂದ್ರ ಕೌಜಲಗಿ, ಅಮರೇಶ ಸಾಲಕ್ಕಿ, ರಮೇಶ ತೇಲಿ, ಸಂಗಮೇಶ ಬದಾಮಿ ಮತ್ತಿತರರಿದ್ದರು.