ಜಿಲ್ಲೆ

ಕನಕಪುರ ನಗರಸಭೆ ಸದಸ್ಯನ ಸದಸ್ಯತ್ವ ರದ್ದು

ಕನಕಪುರ: ಭೂಮಿ ತಂತ್ರಾಂಶಕ್ಕೆ ಕನ್ನ ಹಾಕಿ ಕೋಟ್ಯಂತರ ರೂ. ಮೌಲ್ಯದ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ಖಾತೆ ಮಾಡಿ, ಸರ್ಕಾರದ ಬೊಕ್ಕಸಕ್ಕೆ ನಷ್ಟವನ್ನುಂಟು ಮಾಡಿದ ಆರೋಪದಲ್ಲಿ ರಾಮದುರ್ಗಯ್ಯ ಅವರ ನಗರಸಭೆ ಸದಸ್ಯತ್ವವನ್ನು ಸರ್ಕಾರ ಜುಲೈನಲ್ಲೇ ರದ್ದುಗೊಳಿಸಿದ್ದು, ತಿಂಗಳ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

ನಗರಸಭೆ ಮಾಜಿ ಉಪಾಧ್ಯಕ್ಷ, 20ನೇ ವಾರ್ಡ್​ ಹಾಲಿ ಸದಸ್ಯ, ಕಾಂಗ್ರೆಸ್​ ಮುಖಂಡ ರಾಮದುರ್ಗಯ್ಯ ತಾಲೂಕು ಕಚೇರಿ ಹಾಗೂ ಗ್ರಾಪಂ ಪಿಡಿಒಗಳ ಡಾಂಗಲ್​ ಇಲ್ಲದೆ ಕೊಟ್ಟಗಾಳು ಗ್ರಾಮ ಪಂಚಾಯಿತಿಯ ಪಿಚ್ಚನಕೆರೆ ಸರ್ವೇ ನಂ.13 ಮತ್ತು 14ರಲ್ಲಿನ ಎ.ಬಿ. ಸಿಟಿ ಲೇಔಟ್​, ಬನ್ನಿಕುಪ್ಪೆ ಸರ್ವೇ ನಂ.170ರಲ್ಲಿ 18 ಎಕರೆಯಲ್ಲಿ 3 ಪಹಣೆ, ತುಂಗಣಿ ಸರ್ವೇ ನಂ.174ರಲ್ಲಿ 1.05 ಎಕರೆ, ರಾಂಪುರ ಸರ್ವೇ ನಂ.148ರಲ್ಲಿ ಕಾನೂನು ಬಾಹಿರವಾಗಿ ಬೇರೆಯವರಿಗೆ ಖಾತೆ ಮಾಡಿಸಿ ಕೊಟ್ಟಿದ್ದಾರೆಂದು ಸಾಮಾಜಿಕ ಕಾರ್ಯಕರ್ತ ದೊಂಬರದೊಡ್ಡಿ ರವಿಕುಮಾರ್​ ಎಂಬುವವರು ಸೈಬರ್​ಕ್ರೆಂ ಹಾಗೂ ಲೋಕಾಯುಕ್ತ ಪೊಲೀಸರಿಗೆ 2020ರಲ್ಲಿ ದೂರು ನೀಡಿದ್ದರು.

ಇದಲ್ಲದೇ ಆಶ್ರಯ ಯೋಜನೆ ನೆಪದಲ್ಲಿ ಗೊಲ್ಲಹಳ್ಳಿ ಸರ್ವೇ ನಂ.35/5, 6, ಹಾಗೂ 105/8ರಲ್ಲಿ ಯುವ ಡಾಟ್​ ಕಾಮ್​ ಮೂಲಕ ನಕಲಿ ದಾಖಲೆ ಸೃಷ್ಟಿಸಲಾಗಿದೆ ಎಂದು ಸುಪ್ರೀಂ ಕೋರ್ಟ್​ ಮೆಟ್ಟಿಲೇರಿದ್ದರು. ದೂರು ಪರಿಶೀಲಿಸಿದ ಸುಪ್ರೀಂ ಕೋರ್ಟ್​, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲು ಆದೇಶಿಸಿತ್ತು. ಹಾಗೆಯೇ ಅನಧಿಕೃತ ಪಹಣಿ ಸೃಷ್ಟಿಸಿರುವುದು ಭೂಮಿ ತಂತ್ರಾಂಶದಲ್ಲಿ ಬೆಳಕಿಗೆ ಬಂದಿತ್ತು. ಈ ಬಗ್ಗೆ "ವಿಜಯವಾಣಿ' ಸರಣಿ ವರದಿ ಪ್ರಕಟಿಸಿ, ಅಕ್ರಮ ಬಯಲಿಗೆಳೆದಿತ್ತು.

ಪ್ರಕರಣ ಗುಟ್ಟಾಗಿಡಲು ಕಾರಣ?

ಪ್ರಕರಣವನ್ನು ಸರ್ಕಾರ ಗಂಭಿರವಾಗಿ ಪರಿಗಣಿಸಿತ್ತು. ಅಂದಿನ ಸೈಬರ್​ ಕೆಂ ಠಾಣೆ ಸರ್ಕಲ್​ ಇನ್​ಸ್ಪೆಕ್ಟರ್​ ಬಿ.ಟಿ.ಗೋವಿಂದ್​ ಅವರು ರಾಮದುರ್ಗಯ್ಯ ಮತ್ತು ಸಹಚರರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿ, ಜಿಲ್ಲಾಧಿಕಾರಿಗಳಿಗೆ ವರದಿ ನೀಡಿದ್ದರು. ಬಳಿಕ ಜಾಮೀನು ಪಡೆದು ರಾಮದುರ್ಗಯ್ಯ ಹೊರ ಬಂದಿದ್ದರು. ಆದರೆ ರಾಮದುರ್ಗಯ್ಯ ಅವರ ನಗರಸಭೆ ಸದಸ್ಯತ್ವ ರದ್ದುಗೊಳಿಸುವಂತೆ ರೈತ ಸಂ ಹಾಗೂ ಪ್ರಗತಿಪರ ಸಂಟನೆಗಳು ಪ್ರತಿಭಟನೆ ನಡೆಸುತ್ತಲೇ ಇದ್ದವು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ರಾಮದುರ್ಗಯ್ಯ ಅವರ ಅಕ್ರಮಗಳ ವರದಿಯನ್ನು ಕ್ರೋಡಿಕರಿಸಿ ಕಂದಾಯ ಇಲಾಖೆಯ ಪ್ರಾದೇಶಿಕ ಆಯುಕ್ತರಿಗೆ ಸಲ್ಲಿಸಿದ್ದರು. ಆಯುಕ್ತರ ಪರಿಶೀಲನೆ ಬಳಿಕ ಕಳೆದ ಜುಲೈ ತಿಂಗಳಿನಲ್ಲೇ ರಾಮದುರ್ಗಯ್ಯನವರ ಸದಸ್ಯತ್ವವನ್ನು ರದ್ದುಗೊಳಿಸಿದ್ದಾರೆ. ಆದರೂ ಸದಸ್ಯತ್ವ ರದ್ದಾಗಿರುವ ವಿಷಯವನ್ನು ಗುಟ್ಟಾಗಿ ಇಟ್ಟಿರುವುದು ಸಾರ್ವಜನಿಕರಲ್ಲಿ ಪ್ರಶ್ನೆ ಹುಟ್ಟುಹಾಕಿದೆ.

ಅಧಿಕಾರಿಗಳು ಪ್ರಭಾವಕ್ಕೆ ಒಳಗಾದರೆ?

ಸದಸ್ಯತ್ವ ರದ್ದಾಗಿರುವ ವಿಷಯವನ್ನು ಜಿಲ್ಲಾಧಿಕಾರಿಗಳಾಗಲಿ, ನಗರಸಭೆ ಅಧಿಕಾರಿಗಳಾಗಲಿ ಬಹಿರಂಗ ಪಡಿಸದಿರುವುದು, ಅಧಿಕಾರಿಗಳು ಪ್ರಭಾವಕ್ಕೆ ಒಳಗಾದರೆ ಎಂಬ ಶಂಕೆ ವ್ಯಕ್ತಪಡಿಸುತ್ತಿದೆ.

ಇನ್ನು ರಾಮದುರ್ಗಯ್ಯ ಜನಪ್ರತಿನಿಧಿಯಾಗಿ ಜನರಿಗೆ ಮೋಸ ಮಾಡಿರುವುದು ಅಕ್ಷಮ್ಯ. ಇದರಲ್ಲಿ ಯಾರ್ಯಾರು ಶಾಮೀಲಾಗಿದ್ದಾರೆ? ಎಂಬದನ್ನು ತನಿಖೆ ಕೈಗೊಂಡು, ಎಲ್ಲ ತಪ್ಪಿತಸ್ಥರಿಗೆ ಶಿೆ ನೀಡಬೇಕು. ಸರ್ಕಾರ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಗರವಾಸಿಗಳು ಒತ್ತಾಯಿಸಿದ್ದಾರೆ.

ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಿ

ನಗರಸಭೆಯ ಜವಾಬ್ದಾರಿಯುತ ಸದಸ್ಯರಾಗಬೇಕಾಗಿದ್ದ ರಾಮದುರ್ಗಯ್ಯ ಸೈಬರ್​ ಸೆಂಟರ್​ಗಳಲ್ಲಿ ಭೂಮಿ ತಂತ್ರಾಂಶವನ್ನು ದುರುಪಯೋಗಪಡಿಸಿಕೊಂಡು ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟ ಮಾಡಿದ್ದಾರೆ. ಈ ಬಗ್ಗೆ ಪತ್ರಿಕಾ ವರದಿ ಹಾಗೂ ಪ್ರಗತಿಪರ ಸಂಟನೆಗಳ ಹೋರಾಟಕ್ಕೆ ಜಯ ಸಿಕ್ಕಿದೆ. ಸರ್ಕಾರ ರಾಮದುರ್ಗಯ್ಯನವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ಅವರು ನಡೆಸಿರುವ ಅಕ್ರಮಗಳ ತನಿಖೆಗೆ ಎಸ್​ಐಟಿ ರಚಿಸಬೇಕು. ಸಮಗ್ರ, ಪಾರದರ್ಶಕ ತನಿಖೆ ನಡೆಸಿದರೆ ಸಾಕಷ್ಟು ಪ್ರಕರಣ, ಹಗರಣಗಳು ಬೆಳಕಿಗೆ ಬರುತ್ತವೆ ಎಂದು ಜಯಕರ್ನಾಟಕ ಜನಪರ ವೇದಿಕೆ ಸಲಹೆಗಾರ ಕುಮಾರಸ್ವಾಮಿ ವಿಜಯವಾಣಿಗೆ ತಿಳಿಸಿದ್ದಾರೆ.