ಜಿಲ್ಲೆ

ರಕ್ಷಣಾ ಕಾಯ್ದೆ ಜಾರಿಗೆ ಪಟ್ಟು ಕನಕಪುರದಲ್ಲಿ ವಕೀಲರ ಸಂಘದಿಂದ ಪ್ರತಿಭಟನೆ

ಗಂಗಾಧರ ಬಿ ವಿ

ಕನಕಪುರ: ಹಕ್ಕೊತ್ತಾಯಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾಲೂಕು ವಕೀಲರ ಸಂದ ಪದಾಧಿಕಾರಿಗಳು, ಸದಸ್ಯರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಜೆಎಂಎಫ್‌ಸಿ ನ್ಯಾಯಾಲಯದಿಂದ ವಕೀಲರ ಸಂದ ಅಧ್ಯಕ್ಷ ಎಸ್.ವಿ. ವೀರಪ್ಪ ನೇತೃತ್ವದಲ್ಲಿ ಬೈಕ್ ರ‌್ಯಾಲಿ ನಡೆಸಿದ ವಕೀಲರು, ಎಂ.ಜಿ ರಸ್ತೆ, ಹಲಸಿನಮರದೊಡ್ಡಿ, ಕೆ.ಎನ್.ಎಸ್. ಸರ್ಕಲ್, ಸಿ.ಬಿ ಸರ್ಕಲ್ ಮೂಲಕ ತಾಲೂಕು ಕಚೇರಿ ಬಳಿ ಜಮಾಯಿಸಿದರು. ವಕೀಲರ ಆತ್ಮರಕ್ಷಣೆ ಕಾಯ್ದೆಯನ್ನು ಕೂಡಲೇ ಜಾರಿಗೆ ತರುವಂತೆ  ಘೋಷಣೆಗಳನ್ನು ಕೂಗಿದರು. ಜತೆಗೆ ತಮ್ಮ ಹಕ್ಕೊತ್ತಾಯಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ತಹಸೀಲ್ದಾರ್ ವಿ.ಆರ್. ವಿಶ್ವನಾಥ್ ಅವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.

ಪ್ರತಿಭಟನಕಾರರನ್ನು ಉದ್ದೇಶಿಸಿ ವಾತನಾಡಿದ ಎಸ್.ವಿ. ವೀರಪ್ಪ, ಪ್ರಜಾಪ್ರಭುತ್ವದಲ್ಲಿ ನ್ಯಾಯಾಂಗ ವ್ಯವಸ್ಥೆ ಪ್ರಮುಖವಾಗಿದೆ. ಹಲವಾರು ಸಮಯದಲ್ಲಿ ವಕೀಲರು ಜೀವದ ಹಂಗನ್ನು ತೊರೆದು ಕೆಲಸ ಮಾಡುವಾಗ ಅವರಿಗೆ ಸರಿಯಾದ ರಕ್ಷಣೆ ಇರುವುದಿಲ್ಲ. ಈಗಾಗಲೇ ಹಲವಾರು ಕಡೆ ಕರ್ತವ್ಯನಿರತ ವಕೀಲರ ಮೇಲೆ ವಾರಣಾಂತಿಕ ಹಲ್ಲೆಗಳು ನಡೆದಿವೆ. ಇದರಿಂದಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ವಕೀಲರ ರಕ್ಷಣೆ ಕಾಯ್ದೆಯ ಕರಡು ಪ್ರತಿ ಸಿದ್ಧಪಡಿಸಲಾಗಿದೆ. ಚಳಿಗಾಲದ ಅಧಿವೇಶನದಲ್ಲಿ ವಕೀಲರ ಹಿತರಕ್ಷಣಾ ಕಾಯ್ದೆಯನ್ನು ಜಾರಿಗೆ ತರಬೇಕೆಂದು ಆಗ್ರಹಿಸಿದರು.

ಸಂದ ಉಪಾಧ್ಯಕ್ಷ ಟಿ.ಕೆ.ರವಿ, ಕಾರ್ಯದರ್ಶಿ ವೈರಮುಡಿ, ಖಜಾಂಚಿ ಸಿದ್ದರಾಜು, ವಕೀಲರಾದ ಗೋಪಾಲ್‌ಗೌಡ, ದೊಡ್ಡೀರೇಗೌಡ, ಕಾಳಯ್ಯ, ಜೆ.ವಾದೇವ್, ಕಾಮೇಶ್, ಕೆ.ಬಿ.ರಾಜು, ನಂಜೇಗೌಡ, ಚನ್ನೇಗೌಡ, ಗಿರಿಧರ್, ಅನಿತಾ, ಯೋಗೇಶ್, ಜಯರಾಮೇಗೌಡ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.