ಕನಕಗಿರಿ ತಾಲೂಕಿನ ಗೌರಿಪುರ ಗ್ರಾಪಂ ವ್ಯಾಪ್ತಿಯ ಕಾಮಗಾರಿ ನಡೆಯದಿರುವ ಸ್ಥಳಗಳನ್ನು ಕೃಷಿ ಇಲಾಖೆಯ ಜಂಟಿ ನಿರ್ದೇಶಕಿ ಲಲಿತಾ ರಡ್ಡಿ ತಂಡ ಭೇಟಿ ನೀಡಿ ಪರಿಶೀಲಿಸಿತು. ಪಿಡಿಒ ಅಮರೇಶ ರಾಠೋಡ್, ಸ್ಥಳೀಯರಾದ ಯಮನೂರಪ್ಪ, ಅಮರೇಶ ಇತರರಿದ್ದರು.  
ಜಿಲ್ಲೆ

ಗೌರಿಪುರದಲ್ಲಿ ತಂಡದಿಂದ ಕಾಮಗಾರಿ ಪರಿಶೀಲನೆ

ಕುರುವತ್ತಿ ಶ್ರೀಕಾಂತಪ್ಪ

ಕನಕಗಿರಿ: ತಾಲೂಕಿನ ಗೌರಿಪುರ ಗ್ರಾಪಂ ವ್ಯಾಪ್ತಿಯಲ್ಲಿ ಕಾಮಗಾರಿಯಾಗದ ಕುರಿತು ರೈತ ಸಂಘದ ಜಿಲ್ಲಾಧ್ಯಕ್ಷರೊಬ್ಬರು ಆಯಕ್ತಾಲಯಕ್ಕೆ ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ ಬುಧವಾರ ಕೃಷಿ ಇಲಾಖೆ ಜಂಟಿ ನಿರ್ದೇಶಕರ ತಂಡ ಭೇಟಿ ನೀಡಿ ಪರಿಶೀಲಿಸಿತು.

ಗೌರಿಪುರ ಗ್ರಾಪಂ ವ್ಯಾಪ್ತಿಯ ದೇವಲಾಪುರ ಗ್ರಾಮದ ಹಿರೇವಡ್ರಕಲ್ ಸೀಮಾದಿಂದ ನಿಂಗಪ್ಪ ದಳಪತಿ ಜಮೀನಿನವರೆಗೆ ನಾಲಾ ಹೂಳೆತ್ತುವ, ಚಿಕ್ಕ ವಡ್ರಕಲ್

ಗ್ರಾಮದ ರಾಮಣ್ಣ ಭೋವಿ, ಹೊಲದಿಂದ ಚಿಕ್ಕವಡ್ರಕಲ್ ನಾಲಾವರೆಗೂ ಹೂಳೆತ್ತುವ ಕಾಮಗಾರಿಯನ್ನು ಬೋಗಸ್ ಮಾಡಿ 19.5 ಲಕ್ಷ ರೂ.

ದುರುಪಯೋಗಪಡಿಸಿಕೊಳ್ಳಲಾಗಿದೆ ಎಂದು ಸ್ಥಳೀಯರು ತಾಪಂಗೆ ದೂರು ಸಲ್ಲಿಸಿದ್ದರು.

ಆಗ ತಾಪಂ ಗ್ರಾ.ಉ.ಎಡಿ ಶರಪೊನ್ನಿಸಾ ಬೇಗಂ ಭೇಟಿ ನೀಡಿ ಪರಿಶೀಲಿಸಿದ್ದರು. ಆದರೆ, ಇವರು ನೀಡಿದ ವರದಿ ಸಮಂಜಸವಿಲ್ಲದ ಕಾರಣ ದೂರುದಾರರು ಜಿಪಂಗೆ ದೂರು ಸಲ್ಲಿಸಿದ್ದರು. ಆಗ ಜಿಪಂ ಪಿ.ಡಿ ಪ್ರಕಾಶ ವಡ್ಡರ್ ಭೇಟಿ ನೀಡಿ ಪರಿಶೀಲಿಸಿ, ಕಾಮಗಾರಿಯಾಗದಿರುವ ಬಗ್ಗೆ ಖಚಿತಪಡಿಸಿದ್ದರು. ಅಲ್ಲದೇ, ಜಿಪಂ ಸಿಇಒ ಗೆ ವರದಿ ಸಲ್ಲಿಸಿದ್ದರು. ಆದರೆ, ಇದುವರೆಗೂ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಮವಾಗಿರಲಿಲ್ಲ. ರೈತ ಸಂಘದ ಮುಸ್ತಫಾ ಪಠಾನ್ ಆಯುಕ್ತಾಲಯಕ್ಕೆ ದೂರು ಸಲ್ಲಿಸಿದ್ದರಿಂದ ಜಂಟಿ ನಿರ್ದೇಶಕರಾದ ಲಲಿತಾ ರೆಡ್ಡಿ, ತಾಂತ್ರಿಕ ಸಹಾಯಕ ತನುಜಾ, ವೈ.ಎಚ್. ಇದ್ದಲಗಿ ಭೇಟಿ ನೀಡಿ ಪರಿಶೀಲಿಸಿದರು.