ಗುಡದೂರು ಸೀಮಾದಲ್ಲಿ ಕರಡಿಗಳು ನಾಶ ಪಡಿಸಿದ ಕಲ್ಲಂಗಡಿಗಳನ್ನು ರೈತರಾದ ಪಾಮಣ್ಣ, ಮಹಿಬೂಬಸಾಬ, ಕಲೀಸಾಮ ದೇವರಾಳ, ಹನುಮಂತ ಮ್ಯಾಗಡೆಮನಿ, ಯಮನೂರಪ್ಪ ನಾಯಕ ಪ್ರದರ್ಶಿಸುತ್ತಿರುವುದು.  
ಜಿಲ್ಲೆ

ಕರಡಿಗಳ ಹಾವಳಿ ನಿಯಂತ್ರಿಸಿ

ಕುರುವತ್ತಿ ಶ್ರೀಕಾಂತಪ್ಪ

ಕನಕಗಿರಿ: ಗುಡುದೂರು ವ್ಯಾಪ್ತಿಯ ಕಲ್ಲಂಗಡಿ ಹೊಲಕ್ಕೆ ಬುಧವಾರ ತಡರಾತ್ರಿ ಕರಡಿಗಳು ನುಗ್ಗಿ ಫಸಲು ಹಾಳು ಮಾಡಿವೆ.

ಗ್ರಾಮದ ಸರ್ವೇ ನಂ.16/1ರ ಒಂದೂವರೆ ಎಕರೆಯಲ್ಲಿ ರೈತ ಪಾಮಣ್ಣ ಗುಡುದೂರು ಬೀಜೋತ್ಪಾದನೆಯ ಕಲ್ಲಂಗಡಿ ಬೆಳೆದಿದ್ದು, ಕರಡಿ ದಾಳಿಯಿಂದ ನಷ್ಟವಾಗಿದೆ. ತೋಟಗಾರಿಕೆ ಇಲಾಖೆ ಬೆಳೆನಷ್ಟ ಭರಿಸಬೇಕು.

ಕರಡಿ ದಾಳಿಗೆ ತಡೆಗೆ ಅರಣ್ಯ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ರೈತರಾದ ಪಾಮಣ್ಣ, ಮಹಿಬೂಬಸಾಬ ದೇವರಾಳ, ಕಲೀಸಾಮ ದೇವರಾಳ, ಹನುಮಂತ ಮ್ಯಾಗಡೆಮನಿ, ಯಮನೂರಪ್ಪ ನಾಯಕ ಇತರರು ಒತ್ತಾಯಿಸಿದ್ದಾರೆ.