ಕನಕಗಿರಿ: ನರೇಗಾ ಯೋಜನೆಯಡಿ ಹುಲಿಹೈದರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೈಗೊಂಡಿರುವ ಕಳೆದ ವಷರ್ದ ಕಾಮಗಾರಿಗಳನ್ನು ತ್ವರಿತವಾಗಿ ಮುಕ್ತಾಯಗೊಳಿಸಬೇಕು ಎಂದು ಪಿಡಿಒ ಅಮರೇಶ ರಾಠೋಡಗೆ ಜಿಪಂ ಯೋಜನಾ ನಿರ್ದೇಶಕ ಪ್ರಕಾಶ್ ವಡ್ಡರ್ ಸೂಚಿಸಿದರು.
ತಾಲೂಕಿನ ಹುಲಿಹೈದರ ಗ್ರಾಮಕ್ಕೆ ಶನಿವಾರ ಭೇಟಿ ನೀಡಿದ ಅವರು, ಗ್ರಾಪಂ ವತಿಯಿಂದ ನರೇಗಾ ಯೋಜನೆಯಡಿ ಅನುಷ್ಠಾನಗೊಂಡ ಹಾಗೂ ಪ್ರಗತಿಯಲ್ಲಿರುವ ಸಿಸಿ ರಸ್ತೆ, ಚರಂಡಿ, ಅಡುಗೆ ಕೋಣೆ ಸೇರಿ ವಿವಿಧ ಕಾಮಗಾರಿಗಳನ್ನು ಪರಿಶೀಲನೆ ಮಾಡಿ ಮಾತನಾಡಿದರು.
ಗ್ರಾಪಂನಲ್ಲಿ ನಡೆಯುತ್ತಿರುವ ಸಾಮಾಜಿಕ ಪರಿಶೋಧನೆ ಪ್ರಕ್ರಿಯೆ ವೀಕ್ಷಿಸಿ, ಸಾಮಾಜಿಕ ಪರಿಶೋಧನೆಯನ್ನು ಸರಿಯಾಗಿ ಮಾಡಿ. ಕಡತಗಳಲ್ಲಿನ ನ್ಯೂನತೆಗಳನ್ನು ಗ್ರಾಮಸಭೆಯಲ್ಲಿ ಮಂಡಿಸಿ, ವರದಿಯನ್ನು ಮೇಲಧಿಕಾರಿಗಳಿಗೆ ಸಲ್ಲಿಸಲು ತಿಳಿಸಿದರು.
ಇದೇ ವೇಳೆ ಕೂಸಿನ ಮನೆಗೆ ಭೇಟಿ ನೀಡಿ, ಮೂಲಸೌಕರ್ಯ ಒದಗಿಸಲು ಪಿಡಿಒಗೆ ಸೂಚಿಸಿದರು.
ತಾಪಂ ಇಒ ಕೆ.ರಾಜಶೇಖರ್, ತಾಂತ್ರಿಕ ಸಂಯೋಜಕ ಸೈಯದ್ ತನ್ವೀರ್, ಸೋಶಿಯಲ್ ಆಡಿಟರ್ ಸಂಗಾರೆಡ್ಡಿ, ಗ್ರಾಪಂ ಸಿಬ್ಬಂದಿ ಶ್ರೀನಿವಾಸ್, ನಾಗೇಶ್, ಕಸ್ತೂರಿ ಇತರರಿದ್ದರು.