ಕನಕಗಿರಿಯ ರಾಜಬೀದಿಯಲ್ಲಿ ಹಮ್ಮಿಕೊಂಡಿದ್ದ ಗಂಗೆಸ್ಥಳದ ಮೆರವಣಿಗೆಯಲ್ಲಿ ವೀರಭದ್ರಪ್ಪ ಸಮಗಂಡಿ (ದೇವರು) ಕಾಸಿ ಕಟ್ಟಿದ್ದು, ಒಡಪುಗಳನ್ನು ಹೇಳಿದರು. 
ಜಿಲ್ಲೆ

ವೀರಭದ್ರೇಶ್ವರ ದೇವರ ಗಂಗೆಸ್ಥಳ ಅದ್ದೂರಿ

ಪ್ರವೀಣ ಉದುಸಾ ದಲಬಂಜನ್

ಕನಕಗಿರಿ: ಪಟ್ಟಣದ ರಾಜಬೀದಿಯಲ್ಲಿನ ಐತಿಹಾಸಿಕ ವೀರಭದ್ರೇಶ್ವರ ದೇವರ ಗಂಗೆಸ್ಥಳ ಬುಧವಾರ ನೂರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು.

ಬೆಳಗ್ಗೆ ವೀರಭದ್ರೇಶ್ವರ ದೇವಸ್ಥಾನದಲ್ಲಿ ದೇವರಿಗೆ ಅಭಿಷೇಕ ಸಲ್ಲಿಸಲಾಯಿತು. ಬಳಿಕ ವಾದ್ಯಗಳೊಂದಿಗೆ ಪುರವಂತರ ಮನೆಗೆ ತೆರಳಿ ಪೂಜೆ ಸಲ್ಲಿಸಿದರು. ಪುರವಂತರೊಂದಿಗೆ ಬಳೆಗಾರರ ಮನೆಗೆ ಆಗಮಿಸಿ ಅಲ್ಲಿದ್ದ ವೀರಭದ್ರೇಶ್ವರ ಪಟದೊಂದಿಗೆ ಮೇಲುಗಡೆ ಅಗಸೆಯಲ್ಲಿನ ಹಳ್ಳಕ್ಕೆ ತೆರಳಿ, ಗಂಗಾ ಪೂಜೆ ಸಲ್ಲಿಸಲಾಯಿತು. ಅಲ್ಲಿಂದ ಮಹಿಳೆಯರ ಕಳಸ ಕುಂಭದೊಂದಿಗೆ ರಾಜಬೀದಿಯ ಮೂಲಕ ವೀರಭದ್ರೇಶ್ವರ ದೇವಸ್ಥಾನದವರೆಗೆ ಮೆರವಣಿಗೆ ನಡೆಯಿತು. ಮೆರವಣಿಗೆಯುದ್ದಕ್ಕೂ ಹರಕೆ ಹೊತ್ತಿದ್ದ ಭಕ್ತರಿಗೆ ಶಸ್ತ್ರ ಹಾಕಲಾಯಿತು.

ರಭದ್ರಪ್ಪ ಸಮಗಂಡಿ (ದೇವರು), ನಿಂಗಪ್ಪ ಸಮಗಂಡಿ ಒಡಪುಗಳು ನೆರೆದಿದ್ದ ಭಕ್ತರ ಮನ ಸೆಳೆದವು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಪ್ರಮುಖರಾದ ಸುರೇಶ ಗುಗ್ಗಳಶೆಟ್ರ, ಪ್ರಶಾಂತ ಪ್ರಭುಶೆಟ್ಟರ್, ಮಹಾಂತೇಶ ಕುಂಬಾರ, ವೀರಭದ್ರಪ್ಪ ಕುಂಬಾರ, ಕರಬಸಪ್ಪ ಸಮಗಂಡಿ, ವೀರೇಶ ಸಮಗಂಡಿ, ರಾಜಶೇಖರ ಪಾಟೀಲ್, ಸಂತೋಷ ಹಾದಿಮನಿ, ಮಹಾಂತೇಶ ಸಜ್ಜನ್, ಶರಣಪ್ಪ ಭತ್ತದ, ಪ್ರಶಾಂತ ಭತ್ತದ್, ಕಾರ್ತಿಕ, ಬಸವರಾಜ ಸಜ್ಜನ್, ಕಲ್ಲೇಶ ಅಕ್ಕಮ್ಮನವರ ಇತರರಿದ್ದರು.