ಕನಕಗಿರಿಯ ರಸಗೊಬ್ಬರ ಅಂಗಡಿಗೆ ಯೂರಿಯಾ ಸರಬರಾಜಾಗಿದ್ದರಿಂದ ಸೋಮವಾರ ಖರೀದಿಗೆ ರೈತರು ಮುಗಿಬಿದ್ದರು. 
ಜಿಲ್ಲೆ

ಯೂರಿಯಾಗಾಗಿ ಮುಗಿಬಿದ್ದ ರೈತರು

ಶ್ರೀನಾಥ

ಕನಕಗಿರಿ: ಕಳೆದ ಮೂರ್ನಾಲ್ಕು ದಿನಗಳಿಂದ ತಾಲೂಕಿನಲ್ಲಿ ಉತ್ತಮ ಮಳೆಯಾಗಿದ್ದು, ಯೂರಿಯಾ ಖರೀದಿಸಲು ರೈತರು ಪಟ್ಟಣದ ರಸಗೊಬ್ಬರ ಅಂಗಡಿ ಮುಂದೆ ಸೋಮವಾರ ಮುಗಿಬಿದ್ದಿರುವುದು ಕಂಡುಬಂತು.

ಪಟ್ಟಣದ ಒಂದೇ ಅಂಗಡಿಗೆ ಗೊಬ್ಬರ ಸರಬರಾಜು ಆಗಿರುವುದರಿಂದ ಖರೀದಿಗೆ ರೈತರು ಮುಗಿಬಿದ್ದರು. ತಾಲೂಕು ವ್ಯಾಪ್ತಿಯಲ್ಲಿ ಮುಂಗಾರಿಗೆ ಸಜ್ಜೆ, ತೊಗರಿ ಇತರ ಬೆಳೆಗಳ ಬಿತ್ತನೆ ಮಾಡಲಾಗಿದ್ದು, ನಿರಂತರ ಮಳೆಯಿಂದ ಬೆಳೆಗಳಿಗೆ ಜೀವಕಳೆ ಬಂದಿದೆ.

ಜತೆಗೆ ಗೊಬ್ಬರ ಸಿಂಪಡಿಸಲು ಇದು ಸಕಾಲವಾಗಿದ್ದು ಆಧಾರ್ ಕಾರ್ಡ್‌ಗಳನ್ನಿಡಿದು ನಾ ಮುಂದು-ತಾ ಮುಂದು ಎಂದು ಅಂಗಡಿಯತ್ತ ಕೃಷಿಕರು ಧಾವಿಸಿದರು.