ಕನಕಗಿರಿ ತಾಲೂಕಿನ ಹಿರೇಡಂಕನಕಲ್‌ನಲ್ಲಿ ಆಯೋಜಿಸಿದ್ದ ಶಾಂತಿಸಭೆಯಲ್ಲಿ ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಮಾತನಾಡಿದರು. ತಹಸೀಲ್ದಾರ್ ವಿಶ್ವನಾಥ ಮುರುಡಿ, ತಾಪಂ ಇಒ ರಾಜಶೇಖರ, ಗ್ರಾಪಂ ಉಪಾಧ್ಯಕ್ಷ ರಾಮಚಂದ್ರಪ್ಪ, ಸದಸ್ಯೆ ಭಾಗಮ್ಮ, ತಾಪಂ ಮಾಜಿ ಸದಸ್ಯ ಬಸವರಾಜ ಸ್ವಾಮಿ ಇತರರಿದ್ದರು.  
ಜಿಲ್ಲೆ

ಅಸ್ಪಶ್ಯತೆ ಆಚರಿಸಿದರೆ ಕಾನೂನು ಕ್ರಮ

ಕುರುವತ್ತಿ ಶ್ರೀಕಾಂತಪ್ಪ

ಕನಕಗಿರಿ: ಅಸ್ಪಶ್ಯತೆ ಆಚರಣೆ ಕಾನೂನಿನ ಪ್ರಕಾರ ಅಪರಾಧವಾಗಿದ್ದು, ಸರ್ವರೂ ಸಹೋದರರಂತೆ ಬಾಳಬೇಕು ಎಂದು ತಹಸೀಲ್ದಾರ್ ವಿಶ್ವನಾಥ ಮುರುಡಿ ಹೇಳಿದರು.

ತಾಲೂಕಿನ ಹಿರೇಡಂಕನಕಲ್‌ನಲ್ಲಿ ಅಸ್ಪಶ್ಯತೆ ಆಚರಣೆಯಿಂದ ಭಾನುವಾರ ಪ್ರಕರಣ ದಾಖಲಾದ ಹಿನ್ನೆಲೆಯಲ್ಲಿ ಸೋಮವಾರ ಗ್ರಾಮದಲ್ಲಿ ಆಯೋಜಿಸಿದ್ದ ಶಾಂತಿಸಭೆಯಲ್ಲಿ ಮಾತನಾಡಿದರು.

ದೇವಸ್ಥಾನ, ಹೋಟೆಲ್, ಖಾನಾವಳಿ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಜಾತಿ-ತಾರತಮ್ಯ, ಮೇಲು-ಕೀಳು, ಲಿಂಗ ಭೇದ ಆಚರಣೆ ಮಾಡದೇ ಸರ್ವರೂ ಸಮಾನರಾಗಿಬೇಕು. ಅಸ್ಪಶ್ಯತೆ ಆಚರಣೆ ಮಾಡಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.

ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಮಾತನಾಡಿ, ಹೋಟೆಲ್‌ಗಳಲ್ಲಿ ನೀರು ಎತ್ತಿ ಹಾಕುವುದು, ಪ್ರತ್ಯೇಕ ತಟ್ಟೆ, ಲೋಟ ಇಡುವುದು ಅಮಾನವೀಯವಾಗಿದ್ದು, ಕುವೆಂಪು ಆಶಯದಂತೆ ಎಲ್ಲರೂ ವಿಶ್ವ ಮಾನವರಾಗಿ ಬಾಳಬೇಕು ಎಂದು ತಿಳಿಸಿದರು.