ತಾವರಗೇರಾದಲ್ಲಿ ಮಂಗಳವಾರ ಮಧ್ಯಾಹ್ನ ಒಂದೂವರೆ ಗಂಟೆಗೂ ಹೆಚ್ಚು ಕಾಲ ಗುಡುಗು, ಮಿಂಚು, ಸಿಡಿಲಿನೊಂದಿಗೆ ಭಾರಿ ಮಳೆ ಸುರಿಯಿತು.  
ಜಿಲ್ಲೆ

ಸಿಡಿಲಿಗೆ ರೈತ, ಎತ್ತು ಬಲಿ

ಕನಕಗಿರಿ: ತಾಲೂಕಿನ ಹುಲಿಹೈದರ ಗ್ರಾಮದಲ್ಲಿ ಸಿಡಿಲು ಬಡಿದು ರೈತ ಯಂಕಪ್ಪ ಜಾಡಿ (45) ಮೃತಪಟ್ಟಿದ್ದು, ಒಂದು ಎತ್ತು ಸಹ ಸತ್ತಿದೆ.

ಮಂಗಳವಾರ ಮಧ್ಯಾಹ್ನ ಗುಡುಗು, ಸಿಡಿಲು ಸಹಿತ ಮಳೆ ಸುರಿಯಲಾರಂಭಿಸಿದೆ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಯಂಕಪ್ಪ, ಮಳೆಯಿಂದ ರಕ್ಷಿಸಿಕೊಳ್ಳಲು ದನದ ಶೆಡ್‌ಗೆ ತೆರಳಿದ್ದಾಗ ಸಿಡಿಲು ಬಡಿದಿದೆ.

ಸ್ಥಳಕ್ಕೆ ತಹಸೀಲ್ದಾರ್ ವಿಶ್ವನಾಥ ಮುರುಡಿ ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತನ ಕುಟುಂಬಸ್ಥರಿಗೆ 5.36 ಲಕ್ಷದ ಪರಿಹಾರದ ಆದೇಶ ಪ್ರತಿ ನೀಡಿದರು. ಉಪ ತಹಸೀಲ್ದಾರ್ ಶರಣಪ್ಪ, ಕಂದಾಯ ನಿರೀಕ್ಷಕ ರವಿಕುಮಾರ್ ಜಿ. ನಾಯ್ಕ, ಗ್ರಾಮ ಆಡಳಿತ ಅಧಿಕಾರಿ ಹಾಲೇಶ್, ಸಚಿವರ ಆಪ್ತ ಸಹಾಯಕ ವೆಂಕಟೇಶ್ ಗೋಡಿನಾಳ, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ರಮೇಶ್ ನಾಯಕ ಇತರರಿದ್ದರು.