ಕನಕಗಿರಿಯಲ್ಲಿ ಹಮ್ಮಿಕೊಂಡಿದ್ದ ಪಪಂ ಅಧ್ಯಕ್ಷ-ಉಪಾಧ್ಯಕ್ಷ ಪದಗ್ರಹಣ ಸಮಾರಂಭವನ್ನು ತಹಸೀಲ್ದಾರ್ ವಿಶ್ವನಾಥ ಮುರುಡಿ ಉದ್ಘಾಟಿಸಿದರು. ಸಿಡಿಪಿಒ ವಿರೂಪಾಕ್ಷ, ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ, ಸದಸ್ಯರಾದ ಶರಣೇಗೌಡ, ರಾಜಾಸಾಬ ನಂದಾಪುರ, ರಾಕೇಶ ಕಂಪ್ಲಿ, ಸುರೇಶ ಗುಗ್ಗಳಶೆಟ್ರ, ಹನುಮಂತ ಬಸರಿಗಿಡ ಇತರರಿದ್ದರು.  
ಜಿಲ್ಲೆ

ಸದಸ್ಯರು ಪಕ್ಷಾತೀತವಾಗಿ ಕೆಲಸ ಮಾಡಿ

ಕನಕಗಿರಿ: ಐತಿಹಾಸಿಕ ಹಿನ್ನೆಲೆಯುಳ್ಳ ಪಟ್ಟಣವನ್ನು ಸ್ವಚ್ಛ ಹಾಗೂ ಸುಂದರ ನಗರವನ್ನಾಗಿಸಲು ಪಪಂ ಸದಸ್ಯರು, ಜನತೆ ಮುಂದಾಗಬೇಕು ಎಂದು ತಹಸೀಲ್ದಾರ್ ವಿಶ್ವನಾಥ ಮುರುಡಿ ಹೇಳಿದರು.

ರಂಭಾಪುರಿ ಸಮುದಾಯ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪಪಂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಮಾತನಾಡಿದರು. 17ವಾರ್ಡ್‌ಗಳಿಂದ ಆಯ್ಕೆಯಾದ ಸದಸ್ಯರು ವಾರ್ಡ್ ನಿವಾಸಿಗಳ ಸಮಸ್ಯೆ ಅರಿತು ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಬೇಕು. ಪಟ್ಟಣದ ಅಭಿವೃದ್ಧಿಗೆ ಎಲ್ಲರೂ ಒಗ್ಗೂಡಿ ಶ್ರಮಿಸಬೇಕು ಎಂದರು.

ಪಪಂ ಸದಸ್ಯ ನೂರಸಾಬ್ ಗಡ್ಡಿಗಾಲ ಮಾತನಾಡಿ, ಬಡ ಹಾಗೂ ಮಧ್ಯಮ ವರ್ಗದವರು ತಮ್ಮ ನಿವೇಶನ ಮಾರಲು ಮುಂದಾದಾಗ ಫಾರಂ 3ಪಡೆಯಲು ಕಷ್ಟಪಡುತ್ತಿದ್ದಾರೆ. ಈ ಸೇವೆ ತ್ವರಿತಗೊಳಿಸಿ ಪಕ್ಷಾತೀತವಾಗಿ ಸದಸ್ಯರು ಕೆಲಸ ಮಾಡಬೇಕು ಎಂದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರಸ್ವಾಮಿ ಕಲುಬಾಗಿಲಮಠ ಮಾತನಾಡಿ, ಇಂದಿನಿಂದ ಅಧಿಕಾರ ದೊರೆತಿದ್ದು ಜವಾಬ್ದಾರಿಯಿಂದ ನಿರ್ವಹಿಸಬೇಕಿದೆ ಎಂದರು.

ಕಾಣದ ಉತ್ಸಾಹ: ಪದಗ್ರಹಣ ಕಾರ್ಯಕ್ರಮದಲ್ಲಿ ಉತ್ಸುಕತೆಯಿಂದ ಪಾಲ್ಗೊಳ್ಳಬೇಕಿದ್ದ ಸ್ಥಳೀಯರು ಹೆಚ್ಚಾಗಿ ಭಾಗವಹಿಸಿರಲಿಲ್ಲ. ಅಧ್ಯಕ್ಷರ ಆಯ್ಕೆಯಲ್ಲಿ ಹಣದ ವ್ಯವಹಾರ ನಡೆದಿದ್ದೇ, ಇದಕ್ಕೆ ಕಾರಣವಾಗಿದ್ದು, ಇದರಿಂದ ಬೇಸತ್ತ ಸದಸ್ಯರು ಬೆಂಬಲಿಗರನ್ನು ಕಾರ್ಯಕ್ರಮಕ್ಕೆ ಕರೆದಿರಲಿಲ್ಲ ಎನ್ನಲಾಗಿದೆ. ಪ್ರಾಕೃಪಸಸಂ ಅಧ್ಯಕ್ಷ ಕನಕಪ್ಪ ಬಿ., ಮುಖಂಡ ಸಣ್ಣ ಕನಕಪ್ಪ, ಸಿಡಿಪಿಒ ವಿರೂಪಾಕ್ಷ, ಪಪಂ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ, ಸದಸ್ಯರಾದ ಶರಣೇಗೌಡ, ರಾಜಾಸಾಬ ನಂದಾಪುರ, ರಾಕೇಶ ಕಂಪ್ಲಿ, ಸುರೇಶ ಗುಗ್ಗಳಶೆಟ್ರ, ಹನುಮಂತ ಬಸರಿಗಿಡ, ಶೇಷಪ್ಪ ಪೂಜಾರ, ತನುಶ್ರೀ ರಾಮಚಂದ್ರ, ನಂದಿನಿ ರಾಮಾಂಜನೇಯರೆಡ್ಡಿ, ಶೈನಜಾಬೇಗಂ ಗುಡಿಹಿಂದಲ, ಆಶ್ರಯ ಸಮಿತಿ ಸದಸ್ಯರಾದ ಕನಕಪ್ಪ ಮ್ಯಾಗಡೆ, ಈರಪ್ಪ ಹಾದಿಮನಿ ಇತರರಿದ್ದರು.

ವಾಲ್ಮೀಕಿ ವೃತ್ತದಿಂದ ನವಲಿ ರಸ್ತೆ, ನಿರ್ಲೂಟಿ ರಸ್ತೆ ಇತರೆಡೆ ಫುಟ್‌ಪಾತ್ ಒತ್ತುವರಿಯಾಗಿದ್ದು ಇದನ್ನು ತೆರವುಗೊಳಿಸಿ ಪಟ್ಟಣದ ಸೌಂದರ್ಯ, ವಾಹನ ಮತ್ತು ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು. ರಸ್ತೆ ವಿಸ್ತರಣೆ ಮಾಡುವುದು ಅನಿವಾರ್ಯವಾಗಿದ್ದು, ಇದಕ್ಕೆ ಸದಸ್ಯರು ಹಾಗೂ ಮುಖಂಡರ ಸಲಹೆ ಸಹಕಾರ ಅಗತ್ಯ. ಅನಿಲ್‌ಕುಮಾರ ಬಿಜ್ಜಳ, ಪಪಂ ಸದಸ್ಯ

ಕಾರ್ಯಕ್ರಮ ರದ್ದು

ಕನಕಗಿರಿ ಪಪಂ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರ ಪದಗ್ರಹಣ, ನಾನಾ ಕಾಮಗಾರಿಗಳ ಭೂಮಿ ಪೂಜೆ, ಕನಕಾಚಲ ಸೈನಿಕ ತರಬೇತಿ ಶಾಲೆಗೆ ಉದ್ಘಾಟನೆಗೆ ಆಗಮಿಸಬೇಕಿದ್ದ ಸಚಿವ ಶಿವರಾಜ ತಂಗಡಗಿ ಏಕಾಏಕಿ ಡಿಸಿಎಂ ಡಿ.ಕೆ. ಶಿವಕುಮಾರ ಭೇಟಿಗೆ ಸಿಂಧನೂರಿಗೆ ತೆರಳಿದ್ದರಿಂದ ಕಾರ್ಯಕ್ರಮ ರದ್ದಾಯಿತು. ಇದರಿಂದ ಆಯೋಜಕರು ಕಾದು ಸುಸ್ತಾದರಲ್ಲದೆ, ದಿಢೀರ್ ರದ್ದಾಗಿದ್ದರಿಂದ ಬೇಸರಗೊಂಡರು.