ರಸ್ತೆ ವಿಸ್ತರಣೆಗೆ ಆಗ್ರಹಿಸಿ ಕನಕಗಿರಿ ತಾಲೂಕಿನ ಓಬಳಬಂಡಿ ಗ್ರಾಮದ ರೈತರು ತಹಸೀಲ್ದಾರ್ ವಿಶ್ವನಾಥ ಮುರುಡಿಗೆ ಗುರುವಾರ ಮನವಿ ಸಲ್ಲಿಸಿದರು. ರೈತರಾದ ನಿಂಗಪ್ಪ ಕುರಿ, ಬೆಟ್ಟಪ್ಪ ಹುಳ್ಳಿ, ಈಶಪ್ಪ ಕುರಿ, ಈರಣ್ಣ, ಶಿವಪುತ್ರಪ್ಪ, ಮಂಜುನಾಥ ಹುಳ್ಳಿ, ಭರಮಣ್ಣ ಇತರರಿದ್ದರು.  
ಜಿಲ್ಲೆ

ಜಮೀನುಗಳಿಗೆ ತೆರಳುವ ರಸ್ತೆ ವಿಸ್ತರಿಸಿ

ಕುರುವತ್ತಿ ಶ್ರೀಕಾಂತಪ್ಪ

ಕನಕಗಿರಿ: ಜಮೀನುಗಳಿಗೆ ತೆರಳುವ ರಸ್ತೆ ವಿಸ್ತರಣೆ ಮಾಡಿಕೊಡುವಂತೆ ಆಗ್ರಹಿಸಿ ತಾಲೂಕಿನ ಓಬಳಬಂಡಿ ಗ್ರಾಮದ ರೈತರು ತಹಸೀಲ್ದಾರ್ ವಿಶ್ವನಾಥ ಮುರುಡಿಗೆ ಗುರುವಾರ ಮನವಿ ಸಲ್ಲಿಸಿದರು.

ಗ್ರಾಮದಿಂದ ಕೆರೆಗೆ ಸಾಗುವ ರಸ್ತೆ ಕಿರಿದಾಗಿದೆ. ಇದೇ ದಾರಿಯಲ್ಲಿ ಹಲವು ರೈತರ ಜಮೀನುಗಳಿದ್ದು, ಇಲ್ಲಿಗೆ ತೆರಳಲು ತೊಂದರೆ ಅನುಭವಿಸುವಂತಾಗಿದೆ. ಇತ್ತೀಚೆಗೆ ಕಾರ್ಮಿಕರ ಬದಲು ಯಂತ್ರಗಳಿಂದ ಕೃಷಿ ಚಟುವಟಿಕೆ ನಡೆಸಲಾಗುತ್ತಿದ್ದು, ಬೃಹತ್ ರಾಶಿ ಯಂತ್ರಗಳು, ನೀರಿಗಾಗಿ ಬೋರ್‌ವೆಲ್ ಕೊರೆಯಲು ಬರುವ ಬೋರ್‌ವೆಲ್ ವಾಹನಗಳು ಸಂಚರಿಸುವುದು ಕಷ್ಟಕರವಾಗಿದೆ.

ತಮಗೆ ಬೇಕಾದವರಿಗೆ ಮಾತ್ರ ಇಂತಹ ವಾಹನಗಳು ಸಂಚರಿಸಲು ಅವಕಾಶ ಮಾಡಿಕೊಡುವ ರೈತರು, ಬೇರೆಯವರಿಗೆ ಅವಕಾಶ ನೀಡುವುದಿಲ್ಲ. ಇದರಿಂದ ಸಮಸ್ಯೆ ಎದರಿಸಬೇಕಾಗಿದೆ. ಆದ್ದರಿಂದ ಗ್ರಾಮದಿಂದ ಕೆರೆ ವರೆಗಿನ ರಸ್ತೆಯನ್ನು ವಿಸ್ತರಣೆ ಮಾಡಿ ಅನುಕೂಲ ಮಾಡಿಕೊಡಬೇಕೆಂದು ರೈತರಾದ ನಾಗರಾಜ ಗುಡಿ, ಮಲ್ಲಪ್ಪ ಕುರಿ, ಬಸವರಾಜ ಹುಳ್ಳಿ, ಫಕ್ಕೀರಣ್ಣ ಕುರಿ ಇತರರು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ನಿಂಗಪ್ಪ ಕುರಿ, ಬೆಟ್ಟಪ್ಪ ಹುಳ್ಳಿ, ಈಶಪ್ಪ ಕುರಿ, ಈರಣ್ಣ, ಶಿವಪುತ್ರಪ್ಪ, ಮಂಜುನಾಥ ಹುಳ್ಳಿ, ಭರಮಣ್ಣ ಇತರರಿದ್ದರು.