ಕೌಶಲಾಭಿವೃದ್ಧಿ ಉದ್ಯಮಶೀಲತೆಯಲ್ಲಿ ತರಬೇತಿ ಪಡೆದ ಸ್ವ ಸಹಾಯ ಗುಂಪಿನ ಸದಸ್ಯರಿಗೆ ಕನಕಗಿರಿ ತಾಪಂ ಇಒ ಕೆ. ರಾಜಶೇಖರ ಪ್ರಮಾಣ ಪತ್ರ ವಿತರಿಸಿದರು. ಪ್ರಾಚಾರ್ಯ ಎನ್. ಮಾರೆಪ್ಪ, ಸಂಜೀವಿನಿ ಯೋಜನೆಯ ತಾಲೂಕಿನ ವಲಯ ಮೇಲ್ವೀಚಾರಕಿ ರೇಣುಕಾ ದೇವರಮನಿ ಇತರರಿದ್ದರು.  
ಜಿಲ್ಲೆ

ಆನ್‌ಲೈನ್‌ನಲ್ಲಿ ಉತ್ಪನ್ನ ಮಾರಿ ಲಾಭ ಗಳಿಸಿ

ಕುರುವತ್ತಿ ಶ್ರೀಕಾಂತಪ್ಪ

ಕನಕಗಿರಿ: ತರಬೇತಿ ಪಡೆದ ಸ್ವ ಸಹಾಯ ಗುಂಪಿನ ಸದಸ್ಯರು ತಾವು ತಯಾರಿಸಿದ ವಸ್ತುಗಳನ್ನು ಆನ್‌ಲೈನ್ ಮಾರುಕಟ್ಟೆ ಮೂಲಕ ಮಾರಾಟ ಮಾಡಿ ಹೆಚ್ಚಿನ ಲಾಭ ಪಡೆಯಲು ಮುಂದಾಗಬೇಕು ಎಂದು ತಾಪಂ ಇಒ ಕೆ. ರಾಜಶೇಖರ ಹೇಳಿದರು.

ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ (ಕಾಲೇಜು ವಿಭಾಗ)ದಲ್ಲಿ ಕೌಶಲಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಸಹಯೋಗದಲ್ಲಿ 6 ದಿನಗಳ ಕಾಲ ಸ್ವ ಸಹಾಯ ಗುಂಪಿನ ಸದಸ್ಯರಿಗೆ ಹಮ್ಮಿಕೊಂಡಿದ್ದ ಉದ್ಯಮಶೀಲತಾಭಿವೃದ್ಧಿ ತರಬೇತಿ ಸಮಾರೋಪದಲ್ಲಿ ಮಾತನಾಡಿದರು. ಸಂಘದ ಸದಸ್ಯರು ಜೀವನೋಪಾಯಕ್ಕಾಗಿ ತಯಾರಿಸಿದ ನಾನಾ ಬಗೆಯ ಉತ್ಪನ್ನಗಳನ್ನು ಆನ್‌ಲೈನ್ ಮಾರುಕಟ್ಟೆ ಮೂಲಕ ಮಾರಾಟ ಮಾಡಿದರೆ ಹೆಚ್ಚು ಲಾಭ ಗಳಿಸಬಹುದು ಎಂದರು.

ಪ್ರಾಚಾರ್ಯ ಎನ್. ಮಾರೆಪ್ಪ, ಸಂಜೀವಿನಿ ಯೋಜನೆಯ ತಾಲೂಕಿನ ವಲಯ ಮೇಲ್ವೀಚಾರಕಿ ರೇಣುಕಾ ದೇವರಮನಿ, ಸಿಡಾಕ್ ಸಂಸ್ಥೆಯ ತರಬೇತಿ ಸಂಯೋಜಕರಾದ ಅಕ್ಷತಾ, ಶೋಭಾ ಇತರರಿದ್ದರು.