ಕನಕಗಿರಿ: ಅಖಂಡ ಗಂಗಾವತಿ ತಾಲೂಕು ಶಿಕ್ಷಕರ ದಿನಾಚರಣೆಯನ್ನು ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲಾ ಮೈದಾನದಲ್ಲಿ ಸೆ.9ರಂದು ಆಚರಿಸಲಾಗುವುದು ಎಂದು ಬಿಇಒ ಸೋಮಶೇಖರಗೌಡ ಪಾಟೀಲ್ ಹೇಳಿದರು.
ಕೆಪಿಎಸ್ ಶಾಲೆಯಲ್ಲಿ ಗುರುವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಅಖಂಡ ಗಂಗಾವತಿ ತಾಲೂಕು ಶಿಕ್ಷಕರ ದಿನಾಚರಣೆಯಲ್ಲಿ ಎರಡೂ ಕ್ಷೇತ್ರಗಳ ಶಾಸಕರು ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳಲು ಎಂಟು ಸಮಿತಿ ರಚಿಸಲಾಗಿದೆ. ಅಂದು ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಭಾವಚಿತ್ರದ ಮೆರವಣಿಗೆಯನ್ನು ಕಲ್ಮಠದಿಂದ ವಾಲ್ಮೀಕಿ ವೃತ್ತದ ಮೂಲಕ ಕೆಪಿಎಸ್ ಮೈದಾನದವರೆಗೆ ನಡೆಸಲಾಗುವು ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷೆ ಶಂಶಾದ್ ಬೇಗಂ ಮಾತನಾಡಿ, ಶಿಕ್ಷಕರ ದಿನಾಚರಣೆಯಲ್ಲಿ ರಕ್ತದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ಶಿಕ್ಷಕರು ಸ್ವ ಇಚ್ಛೆಯಿಂದ ರಕ್ತದಾನ ಮಾಡಿ ಸಾಮಾಜಿಕ ಕಳಕಳಿ ಮೆರೆಯಬೇಕೆಂದು ತಿಳಿಸಿದರು.
ಕಸಾಪ ಜಿಲ್ಲಾಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಾರಟಗಿ ತಾಲೂಕು ಅಧ್ಯಕ್ಷ ಬಸವರಾಜ ವಕ್ಕಳದ, ಮಂಜುಳಾ ಶ್ಯಾವಿ ಇತರರಿದ್ದರು.
ಪದಾಧಿಕಾರಿಗಳಿಗೆ ಆಹ್ವಾನವಿಲ್ಲ: ಸರ್ಕಾರಿ ನೌಕರರ ಸಂಘದಲ್ಲಿ ಪದಾಧಿಕಾರಿಗಳಾಗಿ ಕಾರ್ಯನಿರ್ವಹಿಸುವ ಶಿಕ್ಷಕರಿಗೆ ಆಹ್ವಾನವಿರದ ಹಾಜರಿರಲಿಲ್ಲ. ನೌಕರರ ಸಂಘದ ಕಾರ್ಯದರ್ಶಿ ಶಿವಪ್ಪ ಇಲಾಖೆಯ ಅಧಿಕಾರಿಯಾಗಿ ಭಾಗವಹಿಸಿದ್ದರು ಎಂದು ಶಿಕ್ಷಕರೊಬ್ಬರು ತಿಳಿಸಿದರು.
ಪೂರ್ವಭಾವಿ ಸಭೆ ಆ.29ರಂದು ನಡೆಯಬೇಕಿತ್ತು. ಕೆಲ ಕಾರಣಗಳಿಂದಾಗಿ ಸೆ.1ರಂದು ನಡೆಸಲಾಗಿದೆ. ಸಭೆ ಕುರಿತಂತೆ ಪ್ರತಿಯೊಬ್ಬ ಪದಾಧಿಕಾರಿಗಳ ಮೊಬೈಲ್‌ಗೆ ಸಂದೇಶ ಕಳುಹಿಸಲಾಗಿದೆ. ನೌಕರರ ಸಂಘದ ಕಾರ್ಯದರ್ಶಿ ಭಾಗವಹಿಸಿದ್ದರು.| ಸೋಮಶೇಖರಗೌಡ ಪಾಟೀಲ್ ಬಿಇಒ, ಗಂಗಾವತಿ