ಕನಕಗಿರಿ ತಾಲೂಕಿನ ಸುಳೇಕಲ್ ಬಳಿ ನಿರ್ಮಾಣವಾಗುತ್ತಿರುವ ಹೇರೂರು, ಹುಲಿಹೈದರ್ ಬಹುಗ್ರಾಮ ಕುಡಿವ ನೀರು ಯೋಜನೆಯ ಕೆರೆ ಕಾಮಗಾರಿ ಕುರಿತು ಜಿಪಂ ಸಿಇಒ ವರ್ಣಿತ್ ನೇಗಿ ಮಾಹಿತಿ ಪಡೆದರು. ತಾಪಂ ಇಒ ರಾಜಶೇಖರ್ ಕೆ, ಗ್ರಾಮೀಣ ಕುಡಿವ ನೀರು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರ ಮಹೇಶ್ ಶಾಸ್ತ್ರಿ ಹಾಗೂ ಎಇಇ ದೇವಣ್ಣ ಕಟ್ಟಿ ಇದ್ದರು. 
ಜಿಲ್ಲೆ

ಕೆರೆ ತುಂಬಿಸಲು ಕ್ರಮವಹಿಸಿ

ಕನಕಗಿರಿ: ತಾಲೂಕಿನ ಸುಳೇಕಲ್ ಬಳಿ ಹೇರೂರು, ಹುಲಿಹೈದರ ಜಿಪಂ ಕ್ಷೇತ್ರ ವ್ಯಾಪ್ತಿಯ 27 ಗ್ರಾಮಗಳಿಗೆ ಕುಡಿವ ನೀರು ಒದಗಿಸುವ ಬಹುಗ್ರಾಮ ಕುಡಿವ ನೀರು ಯೋಜನೆಯ ನೂತನ ಕೆರೆ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಜಿಪಂ ಸಿಇಒ ವರ್ಣಿತ್ ನೇಗಿ ಶನಿವಾರ ಭೇಟಿ ನೀಡಿ ಪರಿಶೀಲಿಸಿದರು.

33 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗುತ್ತಿರುವ ಕೆರೆಯ ಬಗ್ಗೆ ಗ್ರಾಮೀಣ ಕುಡಿವ ನೀರು ನೈರ್ಮಲ್ಯ ವಿಭಾಗದ ಕಾರ್ಯಪಾಲಕ ಅಭಿಯಂತರ ಮಹೇಶ್ ಶಾಸ್ತ್ರಿ ಹಾಗೂ ಎಇಇ ದೇವಣ್ಣ ಕಟ್ಟಿ ಅವರಿಂದ ಮಾಹಿತಿ ಪಡೆದುಕೊಂಡರು.

ನಂತರ ಕೆರೆ ಕಾಮಗಾರಿಯನ್ನು ವೀಕ್ಷಿಸಿ, ಆದಷ್ಟು ಬೇಗನೆ ಕೆರೆಗೆ ನೀರನ್ನು ತುಂಬಿಸಲು, ಕೆರೆಯಿಂದ ವಿವಿಧ ಗ್ರಾಮಗಳಿಗೆ ಸುವ್ಯವಸ್ಥಿತವಾಗಿ ಕುಡಿವ ನೀರು ಸರಬರಾಜು ಮಾಡಲು ಸೂಕ್ತ ಕ್ರಮವಹಿಸಿ ಎಂದು ಸೂಚಿಸಿದರು.

ಕನಕಗಿರಿ ತಾಪಂ ಇಒ ರಾಜಶೇಖರ್ ಕೆ, ಗಂಗಾವತಿ ತಾಪಂ ಇಒ ರಾಮರಡ್ಡಿ ಪಾಟೀಲ್, ಸಿಬ್ಬಂದಿ ನಾಗರಾಜ, ಸತೀಶ್, ಪಿಡಿಒ ಲಕ್ಷಣ್ ಇತರರಿದ್ದರು.