ಕನಕಗಿರಿ ರಾಜಬೀದಿಯಲ್ಲಿ ಶ್ರೀರಾಮನ ಭಾವಚಿತ್ರದ ಮೆರವಣಿಗೆ ನಡೆಯಿತು. ಮಾಲಾಧಾರಿಗಳಾದ ವೆಂಕಟೇಶ, ವೆಂಕೋಬ ಪೂಜಾರ, ಹನುಮೇಶ, ಪ್ರಹ್ಲಾದರೆಡ್ಡಿ, ಕಿರಣ್ ಸೇರಿ ನೂರಾರು ಹನುಮ ಮಾಲಾಧಾರಿಗಳಿದ್ದರು. 
ಜಿಲ್ಲೆ

ಶ್ರೀರಾಮನ ಭಾವಚಿತ್ರ ಮೆರವಣಿಗೆ

ಕನಕಗಿರಿ: ಪಟ್ಟಣದಲ್ಲಿ ಶ್ರೀರಾಮ ನವಮಿ ನಿಮಿತ್ತ ಹನುಮ ಮಾಲಾಧಾರಿಗಳಿಂದ ಮರ್ಯಾದ ಪುರುಷೋತ್ತಮ ಶ್ರೀರಾಮನ ಭಾವಚಿತ್ರದ ಮೆರವಣಿಗೆ ಸಡಗರದಿಂದ ನಡೆಯಿತು.

ಮಾಲಾಧಾರಿಗಳು ಬೆಳಗ್ಗೆ ಶ್ರೀ ರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ್ದು, ಸಂಜೆ ಅಗಸಿ ಹನುಮಪ್ಪನ ದೇವಸ್ಥಾನದಿಂದ ಶ್ರೀರಾಮನ ಭಾವಚಿತ್ರವನ್ನು ಹನುಮ ಮಾಲಾಧಾರಿಗಳು ಜಯಘೋಷಗಳೊಂದಿಗೆ ರಾಜಬೀದಿಯಲ್ಲಿ ಮೆರವಣಿಗೆ ಮಾಡಿದರು.