ಕನಕಗಿರಿಯ ತೊಂಡಿತೇವರಪ್ಪ ದೇವಸ್ಥಾನದಲ್ಲಿ ರಮಾನುಜಚಾರ್ಯರ ಜಯಂತಿ ಆಚರಿಸಲಾಯಿತು. ಪ್ರಮುಖರಾದ ಸುರೇಶಪ್ಪ ಬೊಂದಾಡೆ, ವೀರೇಶ ವಸ್ತ್ರದ, ಭೀಮರಾವ್ ಮರಾಠಿ, ಕಂಠೆಪ್ಪ ಇತರರಿದ್ದರು. 
ಜಿಲ್ಲೆ

ಹಿಂದುತ್ವಕ್ಕೆ ಶಕ್ತಿ ತುಂಬುವ ಕಾರ್ಯ

ಕನಕಗಿರಿ: ಸಂಪ್ರದಾಯದ ಜತೆಗೆ ಸನಾತನಕ್ಕೆ ಜೀವ ತುಂಬಿದ ಕೀರ್ತಿ ರಮಾನುಜಾಚಾರ್ಯರಿಗೆ ಸಲ್ಲುತ್ತದೆ ಎಂದು ಅರ್ಚಕ ಕಂಠೆಪ್ಪ ಪೂಜಾರ ಹೇಳಿದರು.

ಪಟ್ಟಣದ ತೊಂಡಿತೇರಪ್ಪ ದೇವಸ್ಥಾನದಲ್ಲಿ ಶುಕ್ರವಾರ ಶ್ರೀ ರಾಘವೇಂದ್ರಸ್ವಾಮಿ ಭಜನಾ ಮಂಡಳಿ ಹಮ್ಮಿಕೊಂಡಿದ್ದ ರಮಾನುಜಾಚಾರ್ಯರ ಜಯಂತಿಯಲ್ಲಿ ಮಾತನಾಡಿದರು. ಭಕ್ತಿ ಪರಂಪರೆಗೆ ಕೊಡುಗೆ ನೀಡಿರುವ ರಮಾನುಜರು ನಡೆದು ಬಂದು ಹಾದಿ, ತತ್ವ ಆದರ್ಶಗಳು ನಮ್ಮೆಲ್ಲರಿಗೆ ಪ್ರೇರಣೆಯಾಗಿವೆ. ವೈಷ್ಣವ ಸಂಪ್ರದಾಯವನ್ನು ರೂಢಿಗೆ ತಂದು ಸನಾತನ ಹಾಗೂ ಹಿಂದುತ್ವಕ್ಕೆ ಶಕ್ತಿ ತುಂಬುವ ಕಾರ್ಯ ಮಾಡಿದ್ದಾರೆ ಎಂದು ಸ್ಮರಿಸಿದರು.

ರಮಾನುಜರ ಕುರಿತು ರಚನೆಗೊಂಡ ಹಾಡುಗಳನ್ನು ಭಜಿಸಲಾಯಿತು. ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಂತ್ರಗಳನ್ನು ಪಠಣ ಮಾಡಲಾಯಿತು. ಅರ್ಚಕ ರಾಮಣ್ಣ ಪೂಜಾರ, ಕಲಾವಿದರಾದ ಸೂರ್ಯನಾರಾಯಣರೆಡ್ಡಿ ಮಹಲಿನಮನಿ, ಸುರೇಶಪ್ಪ ಬೊಂದಾಡೆ, ಭೀಮರೆಡ್ಡಿ ಓಣಿಮನಿ, ಅಂಬಣ್ಣ ಮರಾಠಿ, ವಿರೇಶ ವಸ್ತ್ರದ, ಭೀಮರಾವ್ ಮರಾಠಿ, ಕಲೀಲಸಾಬ ಸೇರಿ ಇತರರಿದ್ದರು.