ಕನಕಗಿರಿಯ 14ನೇ ವಾರ್ಡ್‌ನ ವೆಂಕಟರಮಣ ದೇವಸ್ಥಾನದಲ್ಲಿ ವೆಂಕಟೇಶ್ವರ ಭಜನಾ ಮಂಡಳಿಯಿಂದ ಭಜನಾ ಸೇವೆ ಜರುಗಿತು. ಕಲಾವಿದರಾದ ಯಂಕಪ್ಪ ಪೂಜಾರ, ಹನುಮೇಶ ವಾಲೇಕಾರ್, ಮೋಹನ ಅಚ್ಚಲಕರ, ದುರುಗಪ್ಪ ಕೋರಿ, ದುರುಗಪ್ಪ ಇತರರಿದ್ದರು. 
ಜಿಲ್ಲೆ

ಯುವಕರು ಭಜನೆಯಲ್ಲಿ ತೊಡಗಿಕೊಳ್ಳಿ

ಕನಕಗಿರಿ: ಆಧುನಿಕ ಭರಾಟ್ಗೆಯಿಂದ ಭಜನಾ ಕಲೆ ಅಳಿವಿನ ಅಂಚಿನಲ್ಲಿವೆ. ಯುವ ಸಮೂಹ ಕಲೆಯನ್ನು ಉಳಿಸಿ, ಬೆಳೆಸಲು ಮುಂದಾಗಬೇಕು ಎಂದು ಹಾರ್ಮೋನಿಯಂ ಹಿರಿಯ ಕಲಾವಿದ ತೊಂಡೆಪ್ಪ ಹೇಳಿದರು.

ಶ್ರಾವಣ ಮಾಸದ ನಿಮಿತ್ತ ಪಟ್ಟಣದ 14ನೇ ವಾರ್ಡ್‌ನಲ್ಲಿನ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ವೆಂಕಟೇಶ್ವರ ಭಜನಾ ಮಂಡಳಿಯಿಂದ ಹಮ್ಮಿಕೊಂಡಿದ್ದ ತಿಂಗಳ ಪರ್ಯಂತ ಭಜನಾ ಸೇವೆಯಲ್ಲಿ ಭಾನುವಾರ ಮಾತನಾಡಿದರು.

ದಾಸವರೇಣ್ಯರು, ಶರಣರು ತಪಗೈದಿದ್ದರಿಂದ ಕನಕಗಿರಿ ಪುಣ್ಯ ಕ್ಷೇತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಂಥ ಪವಿತ್ರ ನಾಡಿನಲ್ಲಿ ದಾಸರು, ಶರಣರನ್ನು ಸ್ಮರಿಸುವ ನಿಟ್ಟಿನಲ್ಲಿ ಇಂದಿನ ಯುವಕರು ಭಜನಾ ಕಲೆಯಲ್ಲಿ ತೊಡಗಿಸಿಕೊಂಡು ನಾಡಿನೆಲ್ಲೆಡೆ ಕಲೆಯನ್ನು ಬೆಳಗಿಸಬೇಕಿದೆ ಎಂದು ಆಶಿಸಿದರು.

ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕ ರಾಘವೇಂದ್ರ ಚಿತ್ರಗಾರ ಮಾತನಾಡಿ, ತಿಂಗಳ ಪರ್ಯಂತ ನಡೆಯುವ ಭಜನಾ ಸೇವೆ ಮಾಡಲಾಗುತ್ತಿದ್ದು, ಭಕ್ತರು ಸೇವೆಗೆ ತನು, ಮನ, ಧನದಿಂದ ಸಹಕರಿಸುತ್ತಿದ್ದಾರೆ ಎಂದರು.

ಕಲಾವಿದರಾದ ಯಂಕಪ್ಪ ಪೂಜಾರ, ಹನುಮೇಶ ವಾಲೇಕಾರ್, ಮೋಹನ ಅಚ್ಚಲಕರ, ದುರುಗಪ್ಪ ಕೋರಿ, ದುರುಗಪ್ಪ, ಅಬ್ದುಲ್, ಯಂಕೋಬ, ಮುದುಕಪ್ಪ ಸೇರಿದಂತೆ ಗಂಗಾಮತ ಸಮಾಜದ ಹಿರಿಯರು, ಯುವಕರು ಇದ್ದರು.