ಕನಕಗಿರಿಯ ಶ್ರೀ ಸಮಗಂಡಿ ಮಲ್ಲಯ್ಯತಾತನ ಜಾತ್ರೆ ನಿಮಿತ್ತ ಸೋಮವಾರ ತಿಂಗಳ ಪರ್ಯಂತದ ಭಜನೆ ಸಂಪನ್ನಗೊಂಡಿತು. ಪ್ರಮುಖರಾದ ವೀರೇಶ, ಮಲ್ಲಯ್ಯ ಸಮಗಂಡಿ, ಗಂಗಾಧರ ಯಲಬುರ್ಗಿ ಇತರರಿದ್ದರು.  
ಜಿಲ್ಲೆ

ಮಲ್ಲಯ್ಯತಾತನ ಗದ್ದುಗೆಗೆ ರುದ್ರಾಭಿಷೇಕ

ಕನಕಗಿರಿ: ಶ್ರಾವಣ ಮಾಸದ ಕೊನೆಯ ಅಮಾವಾಸ್ಯೆ ನಿಮಿತ್ತ ಪಟ್ಟಣದ 17ನೇ ವಾರ್ಡ್ ವ್ಯಾಪ್ತಿಯ ಶ್ರೀ ಸಮಗಂಡಿ ಮಲ್ಲಯ್ಯತಾತನ ಗದ್ದುಗೆಗೆ ವಿಶೇಷ ಪೂಜೆ ಹಾಗೂ ಜಾತ್ರೋತ್ಸವ ಸೋಮವಾರ ವೈಭವದಿಂದ ನೆರವೇರಿತು.

ತಾತನ ಕರ್ತೃ ಗದ್ದುಗೆಗೆ ರುದ್ರಾಭಿಷೇಕ, ಬಿಲ್ವಾರ್ಚನೆ, ಪುಷ್ಪಾಲಂಕಾರ ಸೇರಿದಂತೆ ನಾನಾ ಪೂಜಾ ಕೈಂಕರ್ಯಗಳು ನೆರವೇರಿದವು. ದೇವಸ್ಥಾನ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

ಇದಕ್ಕೂ ಮೊದಲು ಮಲ್ಲಯ್ಯತಾತ ಭಜನಾ ಮಂಡಳಿಯಿಂದ ನಗರದ ವಿವಿಧ ದೇವಸ್ಥಾನಗಳಿಗೆ ಭಜನೆಯೊಂದಿಗೆ ಭೇಟಿ ನೀಡಿ, ದೀಪರಾಧನೆ, ತೆಂಗಿನಕಾಯಿ ಸಮರ್ಪಣಾ ಕಾರ್ಯಕ್ರಮ ನಡೆಯಿತು. ಭಕ್ತರು ಭಜನೆಯಲ್ಲಿ ಪಾಲ್ಗೊಂಡು ಭಜನಾ ಹಾಡುಗಳ ಮೂಲಕ ಮಲ್ಲಯ್ಯತಾತನನ್ನು ಸ್ಮರಿಸುವ ಮೂಲಕ ತಿಂಗಳ ಪರ್ಯಂತದ ಗ್ರಾಮ ಪ್ರದಕ್ಷಿಣೆ ಕಾರ್ಯಕ್ರಮ ಸಂಪನ್ನಗೊಂಡಿತು.

ಜಿಪಂ ಮಾಜಿ ಸದಸ್ಯ ವೀರೇಶ ಸಮಗಂಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರಸ್ವಾಮಿ, ಪ್ರಮುಖರಾದ ಬಸವಂತಗೌಡ ಪಾಟೀಲ್, ಹೊನ್ನೂರುಸಾಬ ಮೇಸ್ತ್ರಿ, ರವಿ ತಂಗಡಗಿ, ಕಂಠಿರಂಗಪ್ಪ ನಾಯಕ, ನಾಗರಾಜ ಬೊಂದಾಡೆ, ಶಾಂತಪ್ಪ ಬಸರಿಗಿಡದ, ವೀರೇಶ, ಮಲ್ಲಯ್ಯ ಸಮಗಂಡಿ ಇತರರಿದ್ದರು.