ಕನಕಗಿರಿ ತಾಲೂಕಿನ ಗೌರಿಪುರ ಗ್ರಾಮದಲ್ಲಿನ ಬೋರ್‌ವೆಲ್ ಸುತ್ತ ಕೊಳಚೆ ನೀರು ನಿಂತಿರವುದು.  
ಜಿಲ್ಲೆ

ಕೊಳಚೆ ನೀರು ಬೋರ್‌ವೆಲ್ ಸೇರದಿರಲಿ

ಕನಕಗಿರಿ: ತಾಲೂಕಿನ ಗೌರಿಪುರ ಗ್ರಾಮದ ನಿವಾಸಿಗಳಿಗೆ ಕುಡಿವ ನೀರು ಪೂರೈಸುವ ಬೋರ್‌ವೆಲ್ ಸುತ್ತ ಕೊಳಚೆ ನೀರು ನಿಂತು ಕಲುಷಿತಗೊಂಡಿದ್ದರೂ ಗ್ರಾಪಂ ಕಣ್ಮುಚ್ಚಿ ಕುಳಿತಿದೆ.

ಗೌರಿಪುರದಿಂದ ದೇವಲಾಪುರಕ್ಕೆ ಸಾಗುವ ಮುಖ್ಯ ರಸ್ತೆಯ ಬಲಭಾಗದಲ್ಲಿರುವ ಬೋರ್‌ವೆಲ್‌ನಿಂದ ಗ್ರಾಮಕ್ಕೆ ನೀರು ಸರಬರಾಜು ಮಾಡಲಾಗುತ್ತದೆ. ಇದರ ಸುತ್ತ ನಿಂತಿರುವ ಕೊಳಚೆ ನೀರು ಬೋರ್‌ವೆಲ್ ಸೇರುವ ಸಾಧ್ಯತೆ ಹೆಚ್ಚಿದೆ. ಇಷ್ಟಾದರೂ ಗ್ರಾಮಾಡಳಿತ ಕ್ರಮ ವಹಿಸದಿರುವುದು ಅಧಿಕಾರಿ ವರ್ಗದ ನಿರ್ಲಕ್ಷೃಕ್ಕೆ ಹಿಡಿದ ಕನ್ನಡಿಯಾಗಿದೆ.

ಇದು ಮಳೆಗಾಲವಾದ್ದರಿಂದ ಇನ್ನಷ್ಟು ನೀರು ಸಂಗ್ರಹಗೊಂಡು ಬೋರ್‌ವೆಲ್ ಸೇರುವ ಮೊದಲು ಕೊಳಚೆ ನೀರು ನಿಲ್ಲದಂತೆ ಕ್ರಮವಹಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಈ ಹಿಂದೆಯೇ ಸದರಿ ಬೋರ್‌ವೆಲ್‌ಗೆ ಕಟ್ಟೆ ಕಟ್ಟಿಸಲಾಗಿದೆ. ಸುತ್ತಲೂ ಕೊಳಚೆ ನೀರು ನಿಂತರೆ ಮರಂ ಹಾಕಿ ಕ್ರಮ ವಹಿಸಲಾಗುವುದು.

ಹನುಮಂತಪ್ಪ ನಾಯಕ

ಪ್ರಭಾರ ಪಿಡಿಒ ಗೌರಿಪುರ ಗ್ರಾಪಂ