ಕನಕಗಿರಿ: ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ಪಠ್ಯದ ಜತೆಗೆ ಪಠ್ಯೇತರ ಚಟುವಟಿಕೆಗಳು ತುಂಬಾ ಮುಖ್ಯ ಎಂದು ಕೆ.ಕಾಟಾಪುರದ ಪ್ರಭಾರ ಮುಖ್ಯಶಿಕ್ಷಕ ಯಂಕೋಬ ಪೂಜಾರ ಹೇಳಿದರು.
ಕೆ.ಕಾಟಾಪುರದ ಕಿ.ಪ್ರಾ.ಶಾಲೆಯಲ್ಲಿ ಭಾನುವಾರ ಗಣರಾಜ್ಯೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದರು. ಇಂತಹ ಕಾರ್ಯಕ್ರಮಕ್ಕೆ ಪಾಲಕರು ಕೈ ಜೋಡಿಸಿದಾಗ ಯಶಸ್ಸು ಕಾಣಬಹುದು ಎಂದರು.
ಪ್ರತಿನಿತ್ಯ ಮಕ್ಕಳು ತರಗತಿಯೊಳಗೆ ಶೈಕ್ಷಣಿಕ ಚಟುವಟಿಕೆಯಲ್ಲಿ ಅಣಿಯಾಗಿರುತ್ತಾರೆ. ಮಕ್ಕಳಲ್ಲಿನ ಸೂಪ್ತ ಪ್ರತಿಭೆಗಳನ್ನು ಹೊರತೆಗೆಯಲು ಇಂಥ ಕಾರ್ಯಕ್ರಮಗಳು ಅವಶ್ಯ ಎಂದರು.
ಎಸ್ಡಿಎಂಸಿ ಅಧ್ಯಕ್ಷ ಬಸವರಾಜ ಈಳಿಗೇರ ಮಾತನಾಡಿ, ಕೇವಲ ಪಟ್ಟಣದ ವ್ಯಾಪ್ತಿಯ ಶಾಲೆಗಳಲ್ಲಿ ಮಾತ್ರ ಏರ್ಪಡಿಸಲಾಗುತ್ತಿದ್ದ ಕಾರ್ಯಕ್ರಮಗಳು ಹಳ್ಳಿಯ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ನಡೆಯುತ್ತಿರುವುದು ಸಂತಸದ ವಿಚಾರ. ಮಕ್ಕಳು ಎಲ್ಲ ಕ್ಷೇತ್ರಗಳಲ್ಲಿ ಮುಂದೆ ಬರಬೇಕಿದೆ ಎಂದರು. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಎಸ್‌ಡಿಎಂಸಿ ಉಪಾಧ್ಯಕ್ಷ ರಮೇಶ್ ಚಿಗರಿ, ಗ್ರಾಪಂ ಸದಸ್ಯರಾದ ಅಕ್ಕ ನಾಗಮ್ಮ ಗೌಡ್ರು, ಸಣ್ಣ ನರಿಯಪ್ಪ ಗೊಲ್ಲರ್, ನಿರುಪಾದಿ ಗೌಡ್ರು, ಕರಿಯಣ್ಣ ಪಚ್ಚಿ, ದೇವರಾಜ ಭೋವಿ, ದುರುಗಪ್ಪ ಗಾಣದಾಳ, ಚಂದ್ರಪ್ಪ ಹರಿಜನ, ಹನುಮಂತಪ್ಪ ಪಚ್ಚಿ, ನಿರುಪಾದಿ ಕಲ್ಗುಡಿ, ಬಸವರಾಜ ಪಚ್ಚಿ, ವೀರಭದ್ರಪ್ಪ ತಳವಾರ್, ಲಕ್ಷ್ಮಣ ಗೊಲ್ಲರ್, ಶ್ರೀನಿವಾಸ್ ಗೊಲ್ಲರ್, ಹನುಮಂತಪ್ಪ ಹರಿಜನ, ಮಾರುತಪ್ಪ ಇಟ್ಟಿಗೆ, ಬಟ್ಟಿ ಮರಿಯಪ್ಪ ಪಚ್ಚಿ ಶರಣೇಗೌಡ, ಲಕ್ಷ್ಮಣ ಪೂಜಾರಿ ಇತರರಿದ್ದರು.