ಕನಕಗಿರಿ ತಾಲೂಕಿನ ರಾಂಪುರ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಜಿಪಂ ಯೋಜನಾ ನಿರ್ದೇಶಕ ಪ್ರಕಾಶ ವಡ್ಡರ್ ಭೇಟಿ ನೀಡಿ ನರೇಗಾ ಕಾಮಗಾರಿಗಳನ್ನು ಪರಿಶೀಲಿಸಿದರು. ತಾಪಂ ಇಒ ರಾಜಶೇಖರ ಕೆ, ಗ್ರಾಪಂ ಪಿಡಿಒ ನಾಗೇಶ್ ಇತರರಿದ್ದರು. 
ಜಿಲ್ಲೆ

ತ್ವರಿತವಾಗಿ ಶಾಲಾಭಿವೃದ್ಧಿಯ ಬಾಕಿ ಕಾರ್ಯ ಪೂರ್ಣಗೊಳಿಸಿ

ಕನಕಗಿರಿ: ಶಾಲೆಯಲ್ಲಿ ನರೇಗಾದಡಿ ಸೃಜನೆಗೊಂಡ ಆಸ್ತಿಗಳನ್ನು ಸುಸ್ಥಿತಿಯಲ್ಲಿರುವಂತೆ ಶಿಕ್ಷಕರು ಹಾಗೂ ಎಸ್ಡಿಡಿಎಂಸಿ ಮಂಡಳಿ ನೋಡಿಕೊಳ್ಳಬೇಕೆಂದು ಜಿಪಂ ಯೋಜನಾ ನಿರ್ದೇಶಕ ಪ್ರಕಾಶ ವಡ್ಡರ್ ಸೂಚಿಸಿದರು.

ತಾಲೂಕಿನ ರಾಂಪುರ ಶಾಲೆಯಲ್ಲಿ ನರೇಗಾದಡಿ ಕೈಗೆತ್ತಿಕೊಳ್ಳಲಾಗಿರುವ ಶೌಚಗೃಹ ಕಾಮಗಾರಿ ಪರಿಶೀಲಿಸಿ ಶುಕ್ರವಾರ ಮಾತನಾಡಿದರು. ಬಾಕಿ ಇರುವ ಶಾಲಾಭಿವೃದ್ಧಿ ಅವಶ್ಯ ಕಾಮಗಾರಿಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ನಂತರ ಮಕ್ಕಳೊಂದಿಗೆ ಶಿಕ್ಷಣ ಗುಣಮಟ್ಟ, ಬಿಸಿಯೂಟ ಇತರ ಸೌಲಭ್ಯ ಕುರಿತು ಮಾಹಿತಿ ಪಡೆದು, ಕಲಿಕಾಮಟ್ಟ ಪರಿಶೀಲಿಸಿದರು. ತಾಪಂ ಇಒ ಕೆ.ರಾಜಶೇಖರ, ಗ್ರಾಪಂ ಪಿಡಿಒ ನಾಗೇಶ್ ಇತರರಿದ್ದರು.