ಕನಕಗಿರಿ ತಾಲೂಕಿನ ನವಲಿಯಲ್ಲಿ ಹಮ್ಮಿಕೊಂಡಿದ್ದ 4ನೇ ವರ್ಷದ ವೈದಿಕ ಸಂಸ್ಕಾರ ಶಿಬಿರದ ಸಮಾರೋಪ ಹಾಗೂ ಜಂಗಮ ವಟುಗಳ ಅಯ್ಯಚಾರ ದೀಕ್ಷೆ ಕಾರ್ಯಕ್ರಮವನ್ನು ಸಿಂಧನೂರಿನ ರಂಭಾಪುರಿ ಶಾಖಾ ಮಠದ ಶ್ರೀ ಸೋಮನಾಥ ಶಿವಾಚಾರ್ಯರು ಉದ್ಘಾಟಿಸಿದರು. ಶಿಬಿರದ ಮುಖ್ಯಸ್ಥ ಮಾಕರ್ಂಡಯ್ಯ ಸ್ವಾಮಿ, ಪ್ರಮುಖ ವಿರುಪಣ್ಣ ಕಲ್ಲೂರು ಇತರರಿದ್ದರು.  
ಜಿಲ್ಲೆ

ವ್ಯಕ್ತಿತ್ವ ವಿಕಸನಕ್ಕೆ ಸಂಸ್ಕಾರವೇ ತಳಪಾಯ

ಕನಕಗಿರಿ: ನಾವು ಬೆಳೆಯುವ ರೀತಿ-ನೀತಿಗಳಲ್ಲಿ ಬದಲಾವಣೆ ಬೇಕಾಗಿದೆ. ವ್ಯಕ್ತಿಗೆ ಉತ್ತಮ ಸಂಸ್ಕಾರ ಸಿಕ್ಕಾಗ ಮಾತ್ರ ಒಳ್ಳೆಯ ವ್ಯಕ್ತಿತ್ವ ರೂಪುಗೊಳ್ಳಲು ಸಾಧ್ಯ ಎಂದು ಸಿಂಧನೂರಿನ ರಂಭಾಪುರಿ ಶಾಖಾ ಮಠದ ಶ್ರೀ ಸೋಮನಾಥ ಶಿವಾಚಾರ್ಯರು ಹೇಳಿದರು.

ತಾಲೂಕಿನ ನವಲಿ ಜಡೆಸಿದ್ದೇಶ್ವರ ಮಠದಲ್ಲಿ ಸಿಂಹವಾಹಿನಿ ಸಂಸ್ಕೃತ ಸಂಸ್ಕಾರ ಚಾರಿಟಬಲ್ ಟ್ರಸ್ಟ್ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ 4ನೇ ವರ್ಷದ ವೈದಿಕ ಸಂಸ್ಕಾರ ಶಿಬಿರ ಸಮಾರೋಪ ಹಾಗೂ ಜಂಗಮ ವಟುಗಳ ಅಯ್ಯಚಾರ ದೀಕ್ಷೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪರರಿಗೆ ಸಹಾಯ ಮಾಡುತ್ತಾ ಬದುಕುವುದು ಭಗವಂತನಿಗೆ ಪ್ರಿಯವಾಗುತ್ತದೆ. ಮಾನವೀಯತೆ ಬೆಳೆದಾಗ ಮಾತ್ರ ಮನುಷ್ಯನಾಗುತ್ತಾನೆ. ವ್ಯಕ್ತಿತ್ವ ವಿಕಸನಕ್ಕೆ ಸಂಸ್ಕಾರವೇ ತಳಪಾಯ ಎಂದರು.

ರೌಡಕುಂದ ಮಠದ ಶ್ರೀ ಸಿದ್ದರಾಮ ಶರಣರು ಮಾತನಾಡಿ, ಜೀವನದ ಸಾಕ್ಷಾತ್ಕಾರಕ್ಕೆ ಶಿಬಿರಗಳು ಅವಶ್ಯಕ. ನಮ್ಮ ಧರ್ಮ, ಸಂಸ್ಕೃತಿ ಆಚರಣೆಗಳು ಮತ್ತು ಜೀವನದ ಮೌಲ್ಯಗಳನ್ನು ಅರಿತುಕೊಳ್ಳಬೇಕು ಎಂದರು.