ಕನಕಗಿರಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಯುಧ ಪೂಜೆ ನಿಮಿತ್ತ ಬುಧವಾರ ಸಲಕರಣೆಗಳಿಗೆ ಪೂಜೆ ಸಲ್ಲಿಸಲಾಯಿತು. ಶೂಶ್ರುಷಕರಾದ ಮಹಾಂತಪ್ಪ, ಓಂಕಾರಮ್ಮ, ಸವಿತಾ, ಸಂಗೀತಾ, ಜ್ಯೋತಿ, ಡಿ-ಗ್ರೂಪ್ ಸಿಬ್ಬಂದಿ ದಾವಲ್‌ಸಾಬ್, ಹುಲಿಗೆಮ್ಮ ಇತರರಿದ್ದರು. 
ಜಿಲ್ಲೆ

ಸಲಕರಣೆಗಳಿಗೆ ಪುಷ್ಪಾರ್ಚನೆ

ಕನಕಗಿರಿ: ಪಟ್ಟಣದ ನಾನಾ ಕಚೇರಿ, ಅಂಗಡಿ ಮುಂಗಟ್ಟುಗಳು, ಮನೆಗಳು ಸೇರಿ ತಾಲೂಕಿನಾದ್ಯಂತ ನವರಾತ್ರಿಯ ನಿಮಿತ್ತ ಬುಧವಾರ ಆಯುಧ ಪೂಜೆಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು.

ಆಯುಧಪೂಜೆ ನಿಮಿತ್ತ ಇಲ್ಲಿನ ಪೊಲೀಸ್ ಠಾಣೆಯಲ್ಲಿ ದುರ್ಗಾ ಪೂಜೆಯನ್ನು ಸಲ್ಲಿಸಲಾಯಿತು. ಪಿಐ ಎಂ.ಡಿ ಫೈಜುಲ್ಲಾ ನೇತೃತ್ವದಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟ ಪೊಲೀಸರು ವಾಹನಗಳ ಜತೆಗೆ ಇಲಾಖೆಯ ವಾಹನಗಳಿಗೆ, ರಿವಾಲ್ವರ್, ಬಂದೂಕು ಸೇರಿ ಸಾಮಗ್ರಿಗಳಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಸಿಹಿ ಹಂಚಿ ಸಂಭ್ರಮಿಸಿದರು.

ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ದಿನನಿತ್ಯ ಬಳಸುವ ಸಲಕರಣೆಗಳಿಗೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿದರು. ಐತಿಹಾಸಿಕ ಶ್ರೀ ಕನಕಾಚಲಪತಿ ದೇವಸ್ಥಾನ, ಮಹಿಷಾಸುರ ಮರ್ಧಿನಿ ದೇವಸ್ಥಾನ, ಕನ್ಯಕಾಪರಮೇಶ್ವರಿ ದೇವಸ್ಥಾನ ಮತ್ತು ಸಚ್ಚಿದಾನಂದ ಮಠದಲ್ಲಿ ಆಯುಧ ಪೂಜೆಯು ಶ್ರದ್ಧಾ-ಭಕ್ತಿಯಿಂದ ನೆರವೇರಿತು.