ಕನಕಗಿರಿ ಶ್ರೀ ಕನಕಾಚಲಪತಿ ದೇವಸ್ಥಾನದಲ್ಲಿ ನರಸಿಂಹ ಜಯಂತಿ ನಿಮಿತ್ತ ಭಕ್ತರು ಭಜನಾ ಸೇವೆ ಸಲ್ಲಿಸಿದರು. ಹನುಮಂತರೆಡ್ಡಿ ಮಹಲಿನಮನಿ, ಜಯತೀರ್ಥ ಕಳ್ಳಿ, ಅಶೋಕ ನಾಯಕ, ಪ್ರದೀಪಕುಮಾರ ಇತರರಿದ್ದರು. 
ಜಿಲ್ಲೆ

ನರಸಿಂಹ ಜಯಂತಿ ನಿಮಿತ್ತ ಪಲ್ಲಕ್ಕಿ ಮೆರವಣಿಗೆ

ಕನಕಗಿರಿ: ನರಸಿಂಹ ಜಯಂತಿ ನಿಮಿತ್ತ ಇಲ್ಲಿನ ಶ್ರೀ ಕನಕಾಚಲ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ವಿಶೇಷ ಪೂಜೆ ಹಾಗೂ ಭಕ್ತರ ಸಮ್ಮುಖದಲ್ಲಿ ಪಲ್ಲಕ್ಕಿ ಮೆರವಣಿಗೆ ನಡೆಯಿತು.

ದೇವಸ್ಥಾನದಲ್ಲಿ ಪಂಚಾಮೃತ, ಪುಷ್ಪ, ತುಳಸಿ ಅರ್ಚನೆ, ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಮಧ್ಯಾಹ್ನ ಶ್ರೀ ಕನಕಾಚಲ ಭಜನಾ ಸಂಘ ಹಾಗೂ ಭಕ್ತರಿಂದ ದೇವಸ್ಥಾನ ಪ್ರಾಂಗಣದಲ್ಲಿ ಭಜನೆಯೊಂದಿಗೆ ಪಲ್ಲಕ್ಕಿ ಮೆರವಣಿಗೆ ನೆರವೇರಿತು.

ನಂತರ ದೇವಸ್ಥಾನ ಸಮಿತಿಯಿಂದ ಭಕ್ತರಿಗೆ ಕೋಸಂಬರಿ, ಪಾನಕ ವಿತರಿಸಲಾಯಿತು. ಜಯಂತಿಯಲ್ಲಿ ಭಾಗವಹಿಸಿದ್ದ ಭಕ್ತರಿಗೆ ಬಸವರೆಡ್ಡಿ ಚನ್ನಳ್ಳಿ ಅವರ ಕುಟುಂಬದಿಂದ ಪ್ರಸಾದ ವ್ಯವಸ್ಥೆ ಏರ್ಪಡಿಸಲಾಗಿತ್ತು.

ದೇವಸ್ಥಾನ ಸಮಿತಿ ಕಾರ್ಯದರ್ಶಿ ಸಿದ್ದಲಿಂಗಯ್ಯಸ್ವಾಮಿ, ಅರ್ಚಕರಾದ ವಿಜಯಕುಮಾರ, ಮಧುರಕವಿ, ಅನಂತ ಕೃಷ್ಣಾಚಾರ್, ಪ್ರಮುಖರಾದ ಸುರೇಶರಡ್ಡಿ ಮಹಲಿನಮನಿ, ಗೋಪಾಲರೆಡ್ಡಿ, ಗುಂಡಪ್ಪ ಚಿತ್ರಗಾರ, ನಾಗರಾಜ ಚಿತ್ರಗಾರ, ಶರಣಪ್ಪ ಕೊರೆಡ್ಡಿ, ಪ್ರದೀಪಕುಮಾರ ಸೇರಿದಂತೆ ದೇವಸ್ಥಾನ ಸಿಬ್ಬಂದಿ ಇದ್ದರು.