ಕನಕಗಿರಿ: ಬೆಂಗಳೂರಿನ ನಿರ್ಮಾತೃ ಕೆಂಪೇಗೌಡ ಸಾಧನೆ ಎಂದಿಗೂ ಅಜರಾಮರ ಎಂದು ಶಿರಸ್ತೇದಾರ್ ಅನಿತಾ ಇಂಡಿ ಹೇಳಿದರು.
ಪಟ್ಟಣದ ತಹಸಿಲ್ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ಜಯಂತಿಯಲ್ಲಿ ಮಾತನಾಡಿದರು. ಬೆಂಗಳೂರನ್ನು ದೂರದೃಷ್ಟಿಯಿಂದ ಕಟ್ಟಿರುವ ಕೆಂಪೇಗೌಡರ ಕಾರ್ಯ ದೊಡ್ಡದು. ಅಂದು ಅವರು ಜನ-ಜಾನುವಾರುಗಳ ಅನುಕೂಲಕ್ಕಾಗಿ ಕೆರೆ, ಕಲ್ಯಾಣಿ ಹಾಗೂ ಉದ್ಯಾನಗಳನ್ನು ನಿರ್ಮಿಸಿ ಜನಮುಖಿಯಾಗಿದ್ದಾರೆ ಎಂದು ಸ್ಮರಿಸಿದರು.ಶಿರಸ್ತೇದಾರ್ ಶರಣಪ್ಪ, ತಹಸಿಲ್ ಕಚೇರಿ ಸಿಬ್ಬಂದಿ ಶರಣಪ್ಪ, ಗುರುಲಿಂಗಯ್ಯ, ನೀಲಾಂಬಿಕಾ, ಅಮರ್ ತೆಗ್ಗಿನಮನಿ, ಶಿವರಾಜ ಭೋವಿ, ಬಸವರಾಜ ಹುಲಿಹೈದರ ಇತರರಿದ್ದರು.