ಮುಸಲಾಪುರ ಗ್ರಾಮದ ಚನ್ನಬಸವೇಶ್ವರ ಹಾಗೂ ಮಾರುತೇಶ್ವರ ದೇವರ ರಥೋತ್ಸವ ಅದ್ದೂರಿಯಾಗಿ ಜರುಗಿತು. 
ಜಿಲ್ಲೆ

ಮುಸಲಾಪುರದಲ್ಲಿ ಶ್ರೀ ಚನ್ನಬಸವೇಶ್ವರ, ಮಾರುತೇಶ್ವರ ರಥೋತ್ಸವ ಅದ್ದೂರಿ

ಕನಕಗಿರಿ: ಮುಸಲಾಪುರ ಗ್ರಾಮದ ಶ್ರೀ ಮಾರುತೇಶ್ವರ ಹಾಗೂ ಶ್ರೀ ಚನ್ನಬಸವೇಶ್ವರ 14ನೇ ವರ್ಷದ ಜಾತ್ರೋತ್ಸವದ ಅಂಗವಾಗಿ ಶುಕ್ರವಾರ ಸಂಜೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ರಥೋತ್ಸವ ಅದ್ದೂರಿಯಾಗಿ ಜರುಗಿತು. ಬೆಳಗ್ಗೆ ಎರಡೂ ದೇವಸ್ಥಾನಗಳಲ್ಲಿ ಚನ್ನಬಸವೇಶ್ವರ, ಮಾರುತೇಶ್ವರಗೆ ವಿಶೇಷ ಪೂಜೆ, ಅಗ್ನಿಕುಂಡ ಹಾಗೂ ಅನ್ನಪಾಯಸ ಕಾರ್ಯಕ್ರಮ ನಡೆದವು. ಸಂಜೆ ರಥೋತ್ಸವಕ್ಕೆ ಕನಕಗಿರಿಯ ಡಾ.ಚನ್ನಮಲ್ಲಸ್ವಾಮೀಜಿ ಚಾಲನೆ ನೀಡಿದರು. ಭಕ್ತರು ದೇವರಿಗೆ ಜೈಕಾರ ಹಾಕಿ ಉತ್ತತ್ತಿ, ಬಾಳೆ ಹಣ್ಣು ಎಸೆದು ಭಕ್ತಿ ಸಮರ್ಪಿಸಿದರು. ಗ್ರಾಪಂ ಅಧ್ಯಕ್ಷೆ ದೇವಮ್ಮ ಕೊಳಜಿ, ಪ್ರಮುಖರಾದ ಮೌನೇಶ ದಢೇಸುಗೂರು, ಮಹಾಂತೇಶ ಸಜ್ಜನ್ ಇತರರಿದ್ದರು.