ಕನಕಗಿರಿ: ಮನರೇಗಾ ಯೋಜನೆಯಡಿ ಅನುಷ್ಠಾನಗೊಂಡ ಕಾಮಗಾರಿಗಳ ಕಡತಗಳನ್ನು ನಿಯಮಾನುಸಾರವಾಗಿ ಅಪ್ಡೇಟ್ ಮಾಡಬೇಕು ಎಂದು ತಾಪಂ ಸಹಾಯಕ ನಿರ್ದೇಶಕಿ ಶರಪೊನ್ನಿಸಾ ಬೇಗಂ ಹೇಳಿದರು.
ತಾಪಂನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಡತಗಳ ಅಪ್ಡೇಟ್ ಅಭಿಯಾನದಲ್ಲಿ ಮಾತನಾಡಿದರು. ಈಗಾಗಲೇ ತಾಲೂಕಿನ 11 ಗ್ರಾಪಂಗಳಲ್ಲಿ ನರೇಗಾ ಯೋಜನೆಯಡಿ 2024-25ನೇ ಸಾಲಿನ ಹಾಗೂ ಹಿಂದಿನ ವಷರ್ದ ಸಾಕಷ್ಟು ದನದ ಶೆಡ್ ಹಾಗೂ ಸಮುದಾಯದ ಆಧಾರಿತ ಕಾಮಗಾರಿಗಳು ಅನುಷ್ಠಾನಗೊಂಡಿವೆ. ಈ ಎಲ್ಲ ಕಾಮಗಾರಿಗಳ ಕಡತಗಳು ಶೇ.100 ಅಪ್ಡೇಟ್ ಮಾಡುವುದು ಗ್ರಾಪಂ ಸಿಬ್ಬಂದಿ ಕಾರ್ಯವಾಗಿದೆ ಎಂದರು. ಪಿಡಿಒಗಳಾದ ಯು.ಮಲ್ಲಿಕಾರ್ಜುನ, ನಾಗಲಿಂಗಪ್ಪ, ಬಸವರಾಜ ಸಂಕನಾಳ, ಸಿಬ್ಬಂದಿ ಮೋಹನ, ಹೊಳಿಯಪ್ಪ ಇತರರಿದ್ದರು.