ಕನಕಗಿರಿ ತಾಲೂಕಿನ ಚಿಕ್ಕತಾಂಡಾದ ಜನ ಗಂಟು ಮೂಟೆಯೊಂದಿಗೆ ಮೈಸೂರು, ಮಂಡ್ಯದ ಕಡೆ ಕೂಲಿ ಅರಸಿ ಗುಳೆ ಹೋಗುತ್ತಿರುವುದು.  
ಜಿಲ್ಲೆ

ಉದ್ಯೋಗ ಅರಸಿ ಗುಳೆ ಹೊರಟ ಜನರು, ಚಿಕ್ಕತಾಂಡಾದಲ್ಲಿ ಬಿಕೋ ಎನ್ನುತ್ತಿವೆ ಮನೆಗಳು

ಕನಕಗಿರಿ: ತಾಲೂಕಿನ ಗೌರಿಪುರ ಗ್ರಾಪಂ ವ್ಯಾಪ್ತಿಯ ಚಿಕ್ಕತಾಂಡಾದಲ್ಲಿ ಜನರು ಉದ್ಯೋಗ ಅರಸಿ ಮಂಡ್ಯ, ಮೈಸೂರುಗೆ ಭಾಗಕ್ಕೆ ಗುಳೆ ಹೋಗುತ್ತಿದ್ದಾರೆ.

ಚಿಕ್ಕತಾಂಡಾದಲ್ಲಿ 700 ಜನಸಂಖ್ಯೆವಿದೆ. ಕೂಲಿ ಅರಸಿ ವಾಹನಗಳಲ್ಲಿ ಸುಮಾರು 200ಕ್ಕೂ ಹೆಚ್ಚು ಜನರು ಗುಳೆ ಹೋಗಿದ್ದು, ಅತ್ತಿತ್ತ ಓಡಾಡಿ ಕೆಲಸ ಮಾಡಬೇಕಿದ್ದ ನಿವಾಸಿಗಳಿಲ್ಲದೇ ತಾಂಡಾ ಬಿಕೋ ಎನ್ನುತ್ತಿದೆ.

300ಕ್ಕೂ ಹೆಚ್ಚು ಉದ್ಯೋಗ ಚೀಟಿ ಇದೆ. ನರೇಗಾ ಕಾಮಗಾರಿ ಕೆಲಸ ಸಮರ್ಪಕವಾಗಿ ದೊರೆಯದಿದ್ದರಿಂದ ಕಬ್ಬು ಕಡಿಯುವ ಕೆಲಸಕ್ಕೆ ಮುಂದಾಗಿದ್ದಾರೆ. ನರೇಗಾದಲ್ಲಿ ಪ್ರತಿದಿನದ ಕೂಲಿಗೆ 370 ರೂ.ಕೂಲಿ ನೀಡಲಾಗುತ್ತದೆ. ಕಳೆದ ಮೇ ತಿಂಗಳಿನಲ್ಲಿ ತಾಂಡಾದ ನಿವಾಸಿಗಳಿಗೆ ನಾಲಾ ನಿವಾಸಿಗಳಿಗೆ ಸರ್ವೇ ನಂ.48ರಲ್ಲಿ 15 ದಿನ ನರೇಗಾದಡಿ ಕೆಲಸ ನೀಡಿ.

ಕೂಲಿ ಮಾತ್ರ 400ರಿಂದ 800 ರೂ. ಹಾಕಿದ್ದಾರೆ. ಈ ಬಗ್ಗೆ ಕೇಳಿದರೆ ಕೆಲಸ ಮಾಡಿದ ಅಳತೆ ಪ್ರಕಾರ ಕೂಲಿ ಹಣವನ್ನು ಖಾತೆಗೆ ಹಾಕಲಾಗಿದೆ ಎಂದು ಹೇಳುತ್ತಾರೆ. ಇದರಿಂದ ಹೊಟ್ಟೆ ತುಂಬಿಸಿಕೊಳ್ಳಲಾಗುವುದಿಲ್ಲ. ಹೀಗಾಗಿ ನೂರಾರು ಜನರು ಕೆಲಸ ಹರಿಸಿ ಹೋಗಿದ್ದಾರೆ. ಮತ್ತಷ್ಟು ಜನ ಊರು ಬಿಡಲಿದ್ದಾರೆ ಎಂದು ಗ್ರಾಪಂ ಮಾಜಿ ಸದಸ್ಯ ಭೀಮಣ್ಣ ಬೇಸರ ವ್ಯಕ್ತಪಡಿಸಿದರು.

ಗ್ರಾಪಂನವರು ವಯಕ್ತಿಕ ಕಾಮಗಾರಿಗಳನ್ನು ಸಹ ಗ್ರಾಪಂ ನೀಡಿಲ್ಲ. ಮಳೆಯೂ ಇಲ್ಲದೇ ಬೆಳೆ ಒಣಗಿವೆ. ತಾಂಡಾದಲ್ಲಿ ಹೊಲದ ಕೆಲಸವೂ ಇಲ್ಲವಾಗಿದೆ. ಊರಲ್ಲಿ ಇದ್ದರೆ ಜೀವನ ನಡೆಸುವುದ ಹೇಗೆ? ಎಂದು ಗುಳೆ ಹೊರಟವರು ನೋವನ್ನು ತೋಡಿಕೊಂಡರು.

ಮಕ್ಕಳನ್ನು ಸಂಬಂಧಿಕರ ಬಳಿ ಬಿಟ್ಟು ಹೋದ ಪಾಲಕರು: ಗುಳೆ ಹೋದವರು ಕೂಡು ಕುಟುಂಬದಲ್ಲಿರುವವರು ಮನೆಯಲ್ಲಿ ಬಿಟ್ಟು ತೆರಳಿದ್ದಾರೆ. ಇನ್ನುಳಿದವರು ಸಂಬಂಧಿಕರ ಮನೆಯಲ್ಲಿ ಮಕ್ಕಳನ್ನು ಬಿಟ್ಟಿದ್ದಾರೆ. ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ, ಕಾಳಜಿ ವಹಿಸುವಂತೆ ತಿಳಿಸಿದ್ದಾರೆ. ಇನ್ನು ಕೆಲವರು ಮಕ್ಕಳನ್ನು ತಮ್ಮೊಂದಿಗೆ ಜತೆಯಲ್ಲಿ ಕರೆದುಕೊಂಡು ಹೋಗಿದ್ದಾರೆ.

15 ದಿನಗಳ ಕಾಲ ಕೆಲಸ ನೀಡಲಾಗಿದೆ. ದಿನಕ್ಕೆ ಕನಿಷ್ಠ 250 ರೂ. ಮೇಲೆ ಕೂಲಿ ಹಣ ಹಾಕಲಾಗಿದೆ. ಮುಂದೆಯೂ ಕೆಲಸ ನೀಡಲಾಗುವುದು. ಮೇಲಧಿಕಾರಿಗಳೊಂದಿಗೆ ತಾಂಡಾಕ್ಕೆ ತೆರಳಿ ಕಾರ್ಮಿಕರ ಮನವೊಲಿಸಿ ಕೆಲಸ ನೀಡಲಾಗುವುದು.

ಹನುಮಂತಪ್ಪ ಪಿಡಿಒ ಗ್ರಾಪಂ ಪಿಡಿಒ