ಕನಕಗಿರಿ ಐತಿಹಾಸಿಕ ಮಹಿಷಾಸುರ ಮರ್ಧಿನಿ ದೇವಿಯನ್ನು ಅಲಂಕರಿಸಿರುವುದು. 
ಜಿಲ್ಲೆ

ಐತಿಹಾಸಿಕ ಮಹಿಷಾಸುರ ಮರ್ಧಿನಿಗೆ ವಿಶೇಷ ಪೂಜೆ

ಕನಕಗಿರಿ: ಪಟ್ಟಣದ ರಾಜಬೀದಿಯಲ್ಲಿನ ಐತಿಹಾಸಿಕ ಮಹಿಷಾಸುರ ಮರ್ಧಿನಿ ದೇವಸ್ಥಾನದಲ್ಲಿ ಶ್ರಾವಣ ಮಾಸದ ಕೊನೇ ಮಂಗಳವಾರದ ನಿಮಿತ್ತ ವಿಶೇಷ ಪೂಜೆ ನಡೆಯಿತು.

ಶ್ರಾವಣ ಮಂಗಳವಾರ ನಿಮಿತ್ತ ದೇವಿಗೆ ನಾನಾ ಆಭರಣ, ಹೂಗಳಿಂದ ಸಿಂಗರಿಸಲಾಗಿತ್ತು.

ವಿಶೇಷ ಅಭಿಷೇಕ, ಅರ್ಚನೆ ನಡೆದವು. ಭಕ್ತರಿಗೆ ಅನ್ನ ಪ್ರಸಾದ ಏರ್ಪಡಿಸಲಾಗಿತ್ತು. ಪ್ರಮುಖರಾದ ಚಂದ್ರಶೇಖರ ಸಜ್ಜನ್, ಪರಶುರಾಮ ಟೈಲರ್, ಹನುಮೇಶ ಶೆಟ್ರ, ಅಶೋಕ, ಪ್ರವೀಣ ಸಜ್ಜನ್, ನಾಗರಾಜ ಇತರರಿದ್ದರು.