ಕನಕಗಿರಿ ತಾಲೂಕಿನ ಚಿಕ್ಕಮಾದಿನಾಳದಲ್ಲಿ ಮಹರ್ಷಿ ವಾಲ್ಮೀಕಿ ಭಾವಚಿತ್ರ ಮೆರವಣಿಗೆ ಮಾಡಲಾಯಿತು. ಬಸವರಾಜ ಗಾಣದಾಳ, ಬಸಪ್ಪ ಗಂಗನಾಳ, ಹನುಮಂತ ವಾಲೇಕಾರ ಇತರರಿದ್ದರು.  
ಜಿಲ್ಲೆ

ವಾಲ್ಮೀಕಿ ಆದರ್ಶಗಳನ್ನು ಪಾಲಿಸಿ

ಕನಕಗಿರಿ: ಮಹರ್ಷಿ ವಾಲ್ಮೀಕಿಯನ್ನು ನಾಯಕ ಸಮಾಜದವರಷ್ಟೇ ಅಲ್ಲದೇ ಹಿಂದು ಧರ್ಮಿಯರೆಲ್ಲರೂ ಪೂಜಿಸಬೇಕು ಎಂದು ತಾಪಂ ಮಾಜಿ ಅಧ್ಯಕ್ಷ ಬಸವಂತಗೌಡ ಹೇಳಿದರು.

ತಾಲೂಕಿನ ಚಿಕ್ಕಮಾದಿನಾಳದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಕೇವಲ ನಾಯಕ ಸಮುದಾಯಕ್ಕಲ್ಲ. ಅದು ಎಲ್ಲರೂ ಪೂಜಿಸುವ ಮತ್ತು ಅದರಲ್ಲಿನ ಸಾರ ಬದುಕಿನಲ್ಲಿ ಅಳವಡಿಸಿಕೊಳ್ಳುವ ಶ್ರೇಷ್ಠ ಗ್ರಂಥ. ಅವರ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು ಎಂದರು.

ವಾಲ್ಮೀಕಿ ದೇವಸ್ಥಾನದಿಂದ ಪೂಜೇಶ್ವರ ದೇವಸ್ಥಾನದವರೆಗೆ ವಾಲ್ಮೀಕಿ ಭಾವಚಿತ್ರ ಮೆರವಣಿಗೆ ಮಾಡಲಾಯಿತು. ಸಮಾಜದ ಜಿಲ್ಲಾಧ್ಯಕ್ಷ ಕೆ.ಎನ್.ಪಾಟೀಲ್, ಪ್ರಮುಖರಾದ ಶಿವರೆಡ್ಡಿ ನಾಯಕ, ಹನುಮೇಶ ನಾಯಕ, ಹನುಮಂತಪ್ಪ, ಬಸವರಾಜ ಗಾಣದಾಳ, ವೆಂಕಟೇಶ ಬಳಿಗಾರ, ದ್ಯಾಮಣ್ಣ, ಬಸಪ್ಪ ಗಂಗನಾಳ, ವೆಂಕಟೇಶ ಉಪ್ಪಾರ, ಹನುಮಂತಪ್ಪ ವಾಲೇಕಾರ, ಸಣ್ಣ ಕನಕಪ್ಪ, ಮೌನೇಶ ದಢೇಸುಗೂರು, ಮಹಾಂತೇಶ ಸಜ್ಜನ್ ಇತರರಿದ್ದರು.