ಜಿಲ್ಲೆ

ನೀರು ಸೋರಿಕೆಯಾಗಿ ಬೆಳೆ ನಷ್ಟ

ಕನಕಗಿರಿ: ತಾಲೂಕಿನ ಗೌರಿಪುರ, ಬಸರಿಹಾಳ, ಲಾಯದುಣಸಿ ಕೆರೆಗೆ ಕೃಷ್ಣ ಬಿ ಯೋಜನೆಯಡಿ ಅಳವಡಿಸಲಾದ ಪೈಪ್‌ಲೈನ್‌ನಲ್ಲಿ ಪ್ರಯೋಗಾರ್ಥವಾಗಿ ಬುಧವಾರ ನೀರು ಸರಬರಾಜು ಮಾಡಲಾಗಿದ್ದು, ಅಡವಿಬಾವಿ ಚಿಕ್ಕತಾಂಡಾದ ಬಳಿ ಸೋರಿಕೆಯಾಗಿ ರೈತರ ಜಮೀನುಗಳಿಗೆ ನೀರು ನುಗ್ಗಿ ಬೆಳೆ ನಾಶವಾಗಿದೆ.

ಹಲವು ವರ್ಷಗಳ ಬಳಿಕ ಕೃಷ್ಣ ಬಿ ಸ್ಕೀಂನ ಪೈಪ್‌ಲೈನ್ ಕಾಮಗಾರಿ ಮುಗಿದಿದ್ದು, ಬುಧವಾರದಂದು ಕೆಬಿಜೆಎನ್‌ಎಲ್ ಅಧಿಕಾರಿಗಳು ಪ್ರಯೋಗಾರ್ಥವಾಗಿ ನೀರು ಸರಬರಾಜು ಮಾಡಲು ಮುಂದಾಗಿದ್ದಾರೆ. ಆದರೆ, ಅಡವಿಬಾವಿ ಗ್ರಾಮದ ಸರ್ವೇ ನಂ 60ರಲ್ಲಿ ಚಿಕ್ಕತಾಂಡಾದ ಜಮೀನಿನಲ್ಲಿ ಈ ಪೈಪ್‌ಲೈನ್‌ನಲ್ಲಿ ಸಮಸ್ಯೆಯಾಗಿ ನೀರು ಸೋರಿಕೆಯಾಗಿದೆ. ಇದರಿಂದ ಸುಮಾರು 25 ಅಡಿ ಎತ್ತರಕ್ಕೆ ಚಿಮ್ಮಿದ್ದು, ಸುಮಾರು 15 ಎಕರೆ ಜಮೀನಿನಲ್ಲಿನ ಬೆಳೆ ಸಂಪೂರ್ಣ ನೀರಿನಲ್ಲಿ ಮುಳುಗಿ ಹಾಳಾಗಿದೆ.

ಈ ಜಮೀನಿನಲ್ಲಿ ಜೋಳ, ಸಜ್ಜೆ, ಮೆಕ್ಕೆಜೋಳ, ಬೀಜೋತ್ಪಾದನೆಯ ಹತ್ತಿ ಬೆಳೆದಿದ್ದು, ಲಕ್ಷಾಂತರ ಖರ್ಚು ಮಾಡಿ ಬೆಳೆದಿದ್ದ ಬೆಳೆ ನಾಶವಾಗಿದೆ ಎಂದು ರೈತರಾದ ಭೀಮಣ್ಣ, ಶಾಂತಮ್ಮ, ಅಮರೇಶ, ನೀಲಪ್ಪ ತಮ್ಮ ಅಳಲನ್ನು ತೋಡಿಕೊಂಡರು.

================

((ಕೋಟ್))

ಪ್ರಯೋಗಾರ್ಥವಾಗಿ ಬುಧವಾರದಂದು ನೀರು ಸರಬರಾಜು ಮಾಡಲಾಗಿತ್ತು. ಸಂಜೆವರೆಗೂ ಕೆರೆಯ ಸ್ಥಳದಲ್ಲಿದ್ದೆ. ಮಾಹಿತಿ ನೀಡಿರಲಿಲ್ಲ. ಪೈಪ್ ಒಡೆದಿರುವುದಿಲ್ಲ. ಬದಲಾಗಿ ಏರ್‌ವಾಲ್ ಸ್ಟನ್ ಸಮಸ್ಯೆಯಾಗಿರುವ ಸಾಧ್ಯತೆಯಿದೆ.

ರಮೇಶ

ಎಇಇ ಕೆಬಿಜೆಎನ್‌ಎಲ್