ಕನಕಗಿರಿ/ಕಾರಟಗಿ: ಶಿರಾ ಹಾಗೂ ಆರ್.ಆರ್. ನಗರ ಉಪ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳು ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಕನಕಗಿರಿ, ಕಾರಟಗಿಯಲ್ಲಿ ಬಿಜೆಪಿ ಮುಕಂಡರು ಹಾಗೂ ಕಾರ್ಯಕರ್ತರು ಪಟಾಕಿ ಸಿಡಿಸಿ ಸಿಹಿ ಹಂಚಿ ಮಂಗಳವಾರ ವಿಜಯೋತ್ಸವ ಆಚರಿಸಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಶಿರಾ ಕ್ಷೇತ್ರದಲ್ಲಿ ಪ್ರಚಾರ ನಡೆಸಿದ ಶಾಸಕ ಬಸವರಾಜ ದಢೇಸುಗೂರು ಪರ ಕಾರ್ಯಕರ್ತರು ಜೈಕಾರ ಕೂಗಿ ಸಂಭ್ರಮಿಸಿದರು.
ಕನಕಗಿರಿಯಲ್ಲಿ ಮಂಡಲ ಕಾರ್ಯದರ್ಶಿ ವಾಗೇಶ ಹಿರೇಮಠ ಮಾತನಾಡಿ, ರಾಜ್ಯ ಸರ್ಕಾರದ ಅಭಿವೃದ್ಧಿ ಕಾರ್ಯಗಳು, ಕರೊನಾ ಸಂದರ್ಭ ಸರ್ಕಾರ ಕೈಗೊಂಡ ಕ್ರಮಗಳಿಂದಾಗಿ ಎರಡೂ ಕ್ಷೇತ್ರಗಳ ಜನತೆ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಬಿಜೆಪಿ ಪಕ್ಷಕ್ಕೆ ಇದೊಂದು ಐತಿಹಾಸಿಕ ಗೆಲುವಾಗಿದೆ ಎಂದರು.
ಪಪಂ ಸದಸ್ಯ ರವೀಂದ್ರ ಸಜ್ಜನ್, ಮಂಡಲ ಅಧ್ಯಕ್ಷ ಮಹಾಂತೇಶ ಸಜ್ಜನ್, ಜಿಲ್ಲಾ ಎಸ್‌ಸಿ ಮೋರ್ಚಾ ಅಧ್ಯಕ್ಷ ಸಣ್ಣ ಕನಕಪ್ಪ, ಶಕ್ತಿ ಕೇಂದ್ರದ ಅಧ್ಯಕ್ಷ ರಂಗಪ್ಪ ಕೊರಗಟಗಿ, ಪದಾಧಿಕಾರಿಗಳಾದ ಹನುಮೇಶ ವಾಲೇಕಾರ, ತಿಪ್ಪಣ್ಣ ಮಡಿವಾಳ, ಪ್ರಶಾಂತ ಭತ್ತದ್, ಸಂತೋಷ ಹಾದಿಮನಿ, ರಾಜಶೇಖರ, ಬಿ.ವಿ ಜೋಷಿ ಇತರರಿದ್ದರು.
ಕಾರಟಗಿ: ಸಿಎಂ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಎರಡು ಕ್ಷೇತ್ರಗಳಲ್ಲಿ ವಿಜಯ ಸಾಧಿಸಲಾಗಿದೆ. ಈ ಮೂಲಕ ಮತ್ತೊಮ್ಮೆ ಮುಖ್ಯಮಂತ್ರಿ ತಮ್ಮ ಶಕ್ತಿ ಸಾಬೀತು ಪಡಿಸಿದ್ದಾರೆ. ರಾಜ್ಯದ ಜನತೆ ಬಿಜೆಪಿ ಆಡಳಿತ ಮೆಚ್ಚಿ ಮತ ನೀಡಿದ್ದಾರೆ ಎಂದು ಕಾರ್ಯಕರ್ತರು ಬಣ್ಣಿಸಿದರು.
ಪದಾಧಿಕಾರಿಗಳಾದ ಶಿವಶರಣೇಗೌಡ, ಚಂದ್ರಶೇಖರ ಮುಸಾಲಿ, ರತ್ನಕುಮಾರಿ, ಸತ್ಯನಾರಾಯಣ ಕುಲಕರ್ಣಿ, ಮೌನೇಶ ದಡೇಸೂಗೂರು, ಸಂಗನಗೌಡ, ಶಂಕರ್ ಪವಾರ್, ಮಂಜುನಾಥ ಮಸ್ಕಿ, ರಮೇಶ ಸಾಲೋಣಿ, ಜಮದಗ್ನಿ, ಧನಂಜಯ, ರಮೇಶ ರಾಮನಗರ, ಮಹೇಶ ಮೈಲಾಪುರ ಸೇರಿ ಇತರರಿದ್ದರು.