ಕನಕಗಿರಿಯ ಐತಿಹಾಸಿಕ ಕನಕಾಚಲಪತಿಯ ಜಾತ್ರೆಯ ಹಿನ್ನೆಲೆಯಲ್ಲಿ ಪಾದಯಾತ್ರಿಗಳಿಗೆ ಹುಲಿಹೈದರ ಗ್ರಾಮದ ಆಂಜನೇಯ ದೇವಸ್ಥಾನದ ಬಳಿ ಗ್ರಾಮಸ್ಥರಿಂದ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ರಮೇಶ ನಾಯಕ, ಗ್ರಾಪಂ ಸದಸ್ಯ ಶಿವಶಂಕರಪ್ಪ ಚನ್ನದಾಸರ ಇತರರಿದ್ದರು. 
ಜಿಲ್ಲೆ

ದಾನ-ಧರ್ಮದಿಂದ ಒತ್ತಡ ದೂರ

ಕನಕಗಿರಿ: ದೇವರ ನಾಮಸ್ಮರಣೆ, ಭಜನೆ, ಪ್ರವಚನಗಳಿಂದ ಜೀವನದಲ್ಲಿ ನೆಮ್ಮದಿ, ಪುಣ್ಯ ಸಿಗಲಿದೆ ಎಂದು ಶ್ರೀ ಗುರು ಶ್ರೀಶ ವಿಠಲ ಪ್ರತಿಷ್ಠಾನದ ಅಧ್ಯಕ್ಷ ಶ್ರೀನಿವಾಸ ಪದಕಿ ಹೇಳಿದರು.

ಕನಕಾಚಲಪತಿ ಜಾತ್ರಾ ಮಹೋತ್ಸವ ನಿಮಿತ್ತ ಇಲ್ಲಿನ ರಾಘವೇಂದ್ರಸ್ವಾಮಿಗಳ ಮಠದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶ್ರೀ ಗುರು ಶ್ರೀಶ ವಿಠಲ ಪ್ರತಿಷ್ಠಾನ ಟ್ರಸ್ಟ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಆಧುನಿಕತೆ ಭರಾಟೆಯಲ್ಲಿ ಮನುಷ್ಯ ನೆಮ್ಮದಿ ಹುಡುಕುತ್ತಿದ್ದಾನೆ. ಅದಕ್ಕಾಗಿ ದೇವರ ನಾಮಸ್ಮರಣೆ ಮಾಡುವುದು, ದಾನ, ಧರ್ಮ, ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ, ಪ್ರವಚನಗಳಲ್ಲಿ ತೊಡಗಿಸಿಕೊಳ್ಳಬೇಕು. ಇದರಿಂದ ಒತ್ತಡ ದೂರವಾಗಲಿದೆ ಎಂದು ತಿಳಿಸಿದರು.ರಾಜ್ಯೋತ್ಸವ ಪುರಸ್ಕೃತ ಗಾಯಕ ಹುಸೇನದಾಸ ದಾಸರ ಅವರು ಕೀರ್ತನೆ, ದೇವರ ನಾಮಗಳನ್ನು ಸುಶ್ರಾವ್ಯವಾಗಿ ಹಾಡಿದರು.

ವೈಷ್ಣವಿ ಕುಲಕರ್ಣಿ ಮತ್ತು ತಂಡ ಭರತ ನಾಟ್ಯ ನೆರೆದಿದ್ದ ನೂರಾರು ಭಕ್ತರ ಮನಸೂರೆಗೊಳಿಸಿತು.ಉಪಾಧ್ಯಕ್ಷ ಸುಧೀಂದ್ರಾಚಾರ್ಯ ವಿಠಲಾಪುರ, ಪಧಾಧಿಕಾರಿಗಳಾದ ಭೀಮಸೇನ್ ಜೋಷಿ, ಗುರುರಾಜ ಕುಲಕರ್ಣಿ ತೊಂಡಿಹಾಳ್, ಗೋಪಾಲಕೃಷ್ಣ ಕುಲಕರ್ಣಿ ವಿಠಲಾಪುರ, ಗುರುರಾಜ ಕುಲಕರ್ಣಿ ಕನ್ನೇರಮಡುವು, ಎಂ. ಭೀಮರಾವ್ ಕುಲಕರ್ಣಿ, ಟಿ. ವೆಂಕಟೇಶ್ ಕುಲಕರ್ಣಿ, ಕೆ. ಎಚ್, ಕುಲಕರ್ಣಿ, ಗುರುರಾಜ ಕುಲಕರ್ಣಿ, ಭೀಮಸೇನ್, ರಾಘವೇಂದ್ರ ತೊಂಡಿಹಾಳ್, ಕಳ್ಳಿ ಪ್ರಲ್ಹಾದಾಚಾರ್, ಎಂ. ಕೃಷ್ಣ, ಎಂ. ಗೋವಿಂದ್ ರಾವ್, ನರಹರಿ, ನಾಗರಾಜ್ ಇದ್ದರು.