ಕನಕಗಿರಿ: ಪಟ್ಟಣದ ಶ್ರೀ ಕನಕಾಚಲಪತಿ ದೇವಸ್ಥಾನದಲ್ಲಿನ ಕಾಣಿಕೆ ಪೆಟ್ಟಿಗೆಗಳಲ್ಲಿ ಸಂಗ್ರಹವಾದ ಹಣವನ್ನು ಬುಧವಾರ ಎಣಿಕೆ ಮಾಡಲಾಯಿತು.
ಶಿರಸ್ತೇದಾರ್ ಅನಿತಾ ಇಂಡಿ ನೇತೃತ್ವದಲ್ಲಿ ದೇವಸ್ಥಾನದಲ್ಲಿನ ಕಾಣಿಕೆ ಪೆಟ್ಟಿಗೆಗಳನ್ನು ತೆರೆದು ಎಣಿಕೆ ಮಾಡಲಾಗಿದ್ದು, ಎರಡು ತಿಂಗಳಲ್ಲಿ 4,00,910 ಲಕ್ಷ ರೂ. ಸಂಗ್ರಹಗೊಂಡಿದೆ. ಹಣವನ್ನು ಕರ್ನಾಟಕ ಗ್ರಾಮೀಣ ಬ್ಯಾಂಕ್‌ನ ದೇವಸ್ಥಾನದ ಖಾತೆಗೆ ಜಮೆ ಮಾಡಲಾಗಿದೆ ಎಂದು ಕಾರ್ಯದರ್ಶಿ ಸಿದ್ದಲಿಂಗಯ್ಯಸ್ವಾಮಿ ತಿಳಿಸಿದರು.
ವ್ಯವಸ್ಥಾಪನ ಸಮಿತಿ ಸದಸ್ಯರಾದ ವೀರೇಶ ಕಡಿ, ವೆಂಕಟೇಶ ಸೌದ್ರಿ, ದೇವಸ್ಥಾನದ ಸಿಬ್ಬಂದಿ ನಾಗರಾಜ, ಹನುಮೇಶ, ಪಂಪಾಪತಿ, ಹುಸೇನಸಾಬ, ಮಾಬಮ್ಮ, ದುರುಗೇಶ ಇತರರಿದ್ದರು.