ಕನಕಗಿರಿಯ ಕನಕಾಚಲಪತಿ ದೇವಸ್ಥಾನದಲ್ಲಿ ಹುಂಡಿಗಳ ಹಣವನ್ನು ಗುರುವಾರ ಎಣಿಕೆ ಮಾಡಲಾಯಿತು. ಶಿರಸ್ತೇದಾರ್ ಅನಿತಾ ಇಂಡಿ, ತಹಸಿಲ್ ಕಚೇರಿ ಸಿಬ್ಬಂದಿ ವಿಜಯ, ಶರಣಬಸವ ಇತರರಿದ್ದರು.  
ಜಿಲ್ಲೆ

ಕಾಣಿಕೆ ಹಣ ಬ್ಯಾಂಕ್ ಖಾತೆಗೆ ಜಮೆ

ಕನಕಗಿರಿ: ಇಲ್ಲಿನ ಐತಿಹಾಸಿಕ ಕನಕಾಚಲಪತಿ ದೇವಸ್ಥಾನದ ಕಾಣಿಕೆ ಹುಂಡಿಗಳ ಎಣಿಕೆ ಕಾರ್ಯ ಗುರುವಾರ ನಡೆಯಿತು. 70 ದಿನಗಳಲ್ಲಿ 4,61,800 ರೂ. ಸಂಗ್ರಹವಾಗಿದೆ.

ಗ್ರೇಡ್-2 ತಹಸೀಲ್ದಾರ್ ವಿ.ಎಚ್. ಹೊರಪೇಟೆ ನೇತೃತ್ವದಲ್ಲಿ ಎಣಿಕೆ ಕಾರ್ಯ ನಡೆಯಿತು. ಜಾತ್ರೆಯ ಹತ್ತಿರವಾಗುತ್ತಿದ್ದಂತೆ ಎಣಿಕೆ ಮಾಡಲಾಯಿತು. ಎಣಿಕೆ ಮಾಡಿದ ಹಣವನ್ನು ಎಸ್‌ಬಿಐ ಬ್ಯಾಂಕ್‌ಗೆ ಜಮೆ ಮಾಡಲಾಯಿತು ಎಂದು ದೇವಸ್ಥಾನದ ಕಾರ್ಯದರ್ಶಿ ಸಿದ್ದಲಿಂಗಯ್ಯ ತಿಳಿಸಿದರು.

ಶಿರಸ್ತೇದಾರ್ ಅನಿತಾ ಇಂಡಿ, ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಾಗರಾಜ್ ತೆಗ್ಯಾಳ, ಸದಸ್ಯರಾದ ಕೀರ್ತಿ ಸೋನಿ, ವೆಂಕಟೇಶ್ ಸೌದ್ರಿ, ಪ್ರಮುಖರಾದ ಬಿ.ವಿ ಜೋಶಿ ಇತರರಿದ್ದರು.