ಕಲಕೇರಿ ಗ್ರಾಮದಲ್ಲಿ ಶರಣಬಸವೇಶ್ವರ 42ನೇ ಪುರಾಣ ಮಂಗಲೋತ್ಸವದ ನಿಮಿತ್ತ ಏರ್ಪಡಿಸಿದ್ದ ಸಾಮೂಹಿಕ ವಿವಾಹದಲ್ಲಿ ನಾಲ್ಕು ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟವು. ಗ್ರಾಪಂ ಅಧ್ಯಕ್ಷೆ ಕವಿತಾ, ಉಪಾಧ್ಯಕ್ಷ ಶಿವಾನಂದ ವಂಕಲಕುಂಟಿ, ಸಿಡಿಪಿಒ ಕಚೇರಿ ಸಿಬ್ಬಂದಿ ಶಾಹೀದಾಬೇಗಂ ಇತರರಿದ್ದರು. 
ಜಿಲ್ಲೆ

ಆದರ್ಶ ದಂಪತಿಗಳಾಗಿ ಬಾಳಿ - ಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ

ಕನಕಗಿರಿ: ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಂಪತಿಗಳು ನೂತನ ದಂಪತಿ ಒಬ್ಬರನ್ನೊಬ್ಬರು ಅರ್ಥೈಸಿಕೊಂಡು ಸಂಸಾರಿಕ ಬದುಕನ್ನು ಸುಖಿಯಾಗಿಸಿಕೊಳ್ಳಬೇಕು ಎಂದು ಮೈನಳ್ಳಿಯ ಶ್ರೀ ಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ತಾಲೂಕಿನ ಕಲಕೇರಿ ಗ್ರಾಮದಲ್ಲಿ ಶರಣಬಸವೇಶ್ವರ 42ನೇ ಪುರಾಣ ಮಂಗಲೋತ್ಸವದ ನಿಮಿತ್ತ ಭಾನುವಾರ ಆಯೋಜಿಸಿದ್ದ ನಾಲ್ಕು ಜೋಡಿಗಳ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಆರೋಗ್ಯ, ಆದರ್ಶ ದಂಪತಿಗಳಾಗಿ ಸಮಾಜಕ್ಕೆ ಸದೃಢ ಮಕ್ಕಳನ್ನು ನೀಡಬೇಕು. ಹೆಚ್ಚು ಮಕ್ಕಳನ್ನು ಹೆತ್ತು ಕಷ್ಟಪಡುವ ಬದಲು, ಒಂದೆರಡು ಮಕ್ಕಳನ್ನು ಹೆರಬೇಕು. ಅವರಿಗೆ ಉತ್ತಮ ಶಿಕ್ಷಣ ಕೊಡಿಸಿ, ಉತ್ತಮ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಹೇಳಿದರು.

ಗ್ರಾಪಂ ಅಧ್ಯಕ್ಷೆ ಕವಿತಾ, ಉಪಾಧ್ಯಕ್ಷ ಶಿವಾನಂದ ವಂಕಲಕುಂಟಿ, ನವಲಿ ಪ್ರಾಕೃಪಸ ಸಂಘದ ಅಧ್ಯಕ್ಷ ಭೀಮನಗೌಡ ಹರ್ಲಾಪುರ, ಕನಕಗಿರಿ ಸಿಡಿಪಿಒ ಕಚೇರಿ ಸಿಬ್ಬಂದಿ ಶಾಹೀದಾಬೇಗಂ, ಪ್ರಮುಖರಾದ ನಿಂಗಪ್ಪ ನಾಯಕ, ಜಡಿಯಪ್ಪ ಮುಕ್ಕುಂದಿ, ಶಶಾಂಕ ತಂಗಡಗಿ, ವಿರುಪಾಕ್ಷಪ್ಪ ಅಂಗಡಿ, ಲೆಂಕೆಪ್ಪ, ಮಲ್ಲಪ್ಪ ಹೊಸಳ್ಳಿ, ಸಿದ್ದಪ್ಪ ಗಂಗಾಮತ, ಬೆಟ್ಟಪ್ಪ ಕುರುಬರ, ಯಮನೂರಪ್ಪ, ನಾಗರಾಜ ಈಡಿಗೇರ, ದುರುಗಪ್ಪ ಹರಿಜನ, ದೇವಣ್ಣ ಕುರುಬರ, ಲಿಂಗರಾಜ ಮ್ಯಾಗಡೆ, ಹನುಮೇಶ ಗಂಟಗಿ ಇತರರಿದ್ದರು.

ಇದಕ್ಕೂ ಮುನ್ನ ಮಹಿಳೆಯರ ಕಳಸ ಕುಂಭಗಳೊಂದಿಗೆ ಗ್ರಾಮದಲ್ಲಿ ಶ್ರೀ ಶರಣಬಸವೇಶ್ವರರ ಭಾವಚಿತ್ರ ಮೆರವಣಿಗೆ ನಡೆಸಿದರು.