ಕನಕಗಿರಿ ತಹಸಿಲ್ ಕಚೇರಿಯಲ್ಲಿ ತಹಸೀಲ್ದಾರ್ ವಿಶ್ವನಾಥ ಮುರುಡಿ ಅಧ್ಯಕ್ಷತೆಯಲ್ಲಿ ಸ್ವಾತಂತ್ರೃ ದಿನಾಚರಣೆ ಪೂರ್ವಭಾವಿ ಸಭೆ ನಡೆಯಿತು. ತಾಲೂಕು ಪಂಚಾಯಿತಿ ಇಒ ರಾಜಶೇಖರ, ಬಿಸಿಎಂ ಅಧಿಕಾರಿ ಉಷಾ ಮುಜುಂದಾರ್, ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ ಇತರರಿದ್ದರು. 
ಜಿಲ್ಲೆ

ಆಚರಣೆಯಲ್ಲಿ ಶಿಷ್ಟಾಚಾರ ಉಲ್ಲಂಘನೆ ಆಗದಿರಲಿ

ಕನಕಗಿರಿ: ರಾಷ್ಟ್ರೀಯ ಹಬ್ಬ ಸ್ವಾತಂತ್ರೃ ದಿನಾಚರಣೆಯಲ್ಲಿ ಶಿಷ್ಟಾಚಾರ ಉಲ್ಲಂಘನೆಗೆ ಅವಕಾಶ ನೀಡುವಂತಿಲ್ಲ ಎಂದು ತಹಸೀಲ್ದಾರ್ ವಿಶ್ವನಾಥ ಮುರುಡಿ ಸೂಚಿಸಿದರು.

ಇಲ್ಲಿನ ತಹಸಿಲ್ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಸ್ವಾತಂತ್ರೃ ದಿನ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಒಂದು ಕಾರ್ಯಕ್ರಮ ಯಶಸ್ವಿಯಾಗಬೇಕಾದರೆ ಶಿಷ್ಟಾಚಾರ ಅವಶ್ಯ. ಖುದ್ದು ನಾನೇ ವೇದಿಕೆ ಮೇಲಿರಲಿದ್ದು, ಈ ಬಾರಿ ಯಾವುದೇ ಕಾರಣಕ್ಕೂ ಶಿಷ್ಟಾಚಾರ ಉಲ್ಲಂಘನೆಗೆ ಅವಕಾಶ ನೀಡುವುದಿಲ್ಲ ಎಂದರು.

ಬಿಸಿಲು ಮತ್ತು ವಿಳಂಬ ಕಾರಣದಿಂದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಚಿಕ್ಕ ಮಕ್ಳಳನ್ನು ಅಳವಡಿಸಿಕೊಳ್ಳದೇ ಹಿರಿಯ ಹಾಗೂ ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಿ. ಸರ್ಕಾರಿ ಶಾಲಾ ಮಕ್ಕಳು ಬಡ ಹಾಗೂ ಮಧ್ಯಮ ವರ್ಗದವರಾಗಿರುತ್ತಾರೆ. ಸಾಂಸ್ಕೃತಿಕ ಕಾರ್ಯಕ್ರಮ ನೆಪದಲ್ಲಿ ಅಂಥವರಿಗೆ ಬಟ್ಟೆ, ಇತರ ಪರಿಕರಿಗಳಿಗೆ ದುಡ್ಡು ಖರ್ಚು ಮಾಡಿಸುವುದನ್ನು ತಡೆಯಬೇಕು. ಎಲ್ಲ ಶಾಲೆಗಳ ಮಕ್ಕಳನ್ನು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದರ ಬದಲು ಸ್ವಾತಂತ್ರೃ ದಿನಾಚರಣೆಗೆ ಕೆಲ ಶಾಲೆ, ಗಣರಾಜ್ಯೋತ್ಸವಕ್ಕೆ ಇನ್ನುಳಿದ ಶಾಲೆಗಳ ಮಕ್ಕಳು ಭಾಗವಹಿಸುವಂತೆ ಇಲಾಖೆಯು ಮುಖ್ಯೋಪಾಧ್ಯಾಯರಿಗೆ ಸೂಚಿಸಬೇಕೆಂದರು. ನಾನಾ ಕ್ಷೇತ್ರಗಳಲ್ಲಿ ಸಾಧನೈಗೈದವರನ್ನು ಸನ್ಮಾನಿಸಲು ತೀರ್ಮಾನಿಸಲಾಯಿತು.

ತಾಪಂ ಇಒ ರಾಜಶೇಖರ, ಕೆಪಿಎಸ್ ಪ್ರಾಚಾರ್ಯ ಅಮರೇಶ ದೇವರಾಳ, ಬಿಸಿಎಂ ಅಧಿಕಾರಿ ಉಷಾ ಮುಜುಂದಾರ್, ಅರಣ್ಯ ಇಲಾಖೆ ಎಂ.ಡಿ.ಸುಲೇಮಾನ್, ಸಮಾಜ ಕಲ್ಯಾಣ ಇಲಾಖೆ ವಾರ್ಡನ್ ಪಂಪನಗೌಡ, ಇಸಿಒ ಆಂಜನೇಯ, ಸಿಆರ್‌ಪಿ ರಾಜೀವ್, ಪಪಂ ಸಿಬ್ಬಂದಿ ಪ್ರಕಾಶ, ಶಿರಸ್ತೇದಾರ್ ಅನಿತಾ ಇಂಡಿ, ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ, ದೈಹಿಕ ಶಿಕ್ಷಕ ಶ್ಯಾಮೀದ್‌ಸಾಬ್ ಲೈನ್‌ದಾರ್ ಇತರರಿದ್ದರು.