ಹಿರೇಖೇಡ ಗ್ರಾಮದ ಕುಡಿವ ನೀರು ಪೂರೈಸುವ ಕೊಳವೆಬಾವಿಯನ್ನು ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಪರಿಶೀಲಿಸಿದರು. ತಾಪಂ ಇಒ ಕೆ.ರಾಜಶೇಖರ, ಪಿಡಿಒ ಮಲ್ಲಿಕಾರ್ಜುನ ಹಾಗೂ ಆರ್‌ಡಬ್ಲುೃ ಎಸ್ ಅಧಿಕಾರಿಗಳು ಇದ್ದರು. 
ಜಿಲ್ಲೆ

ಜನರಿಗೆ ಕುಡಿವ ನೀರು ಸಮಸ್ಯೆ ಆಗದಿರಲಿ

ಕನಕಗಿರಿ: ಬೇಸಿಗೆಯ ಆರಂಭದ ದಿನಗಳಲ್ಲೇ ಕುಡಿವ ನೀರಿಗೆ ಸಮಸ್ಯೆಯಾದ ಹಿನ್ನೆಲೆಯಲ್ಲಿ ತಾಲೂಕಿನ ಹುಲಿಹೈದರ, ಹಿರೇಖೇಡಾ, ಮುಸಲಾಪುರ, ಚಿಕ್ಕಖೇಡಾ, ರಾಂಪುರ ಹಾಗೂ ಸುತ್ತಲಿನ ಗ್ರಾಮಗಳಿಗೆ ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ ಶುಕ್ರವಾರ ಭೇಟಿ ನೀಡಿದರು.

ಲಭ್ಯವಿರುವ ಬೋರ್‌ವೆಲ್‌ಗಳನ್ನು ಪರಿಶೀಲಿಸಿ, ಬೇಸಿಗೆ ಹಿನ್ನೆಲೆ ಸಾರ್ವಜನಿಕರಿಗೆ ಕುಡಿವ ನೀರಿನ ಸಮಸ್ಯೆಯಾಗದಂತೆ ಕ್ರಮ ವಹಿಸಲು ಆರ್.ಡಬ್ಲುೃಎಸ್ ಅಧಿಕಾರಿಗಳಿಗೆ ಸೂಚಿಸಿದರು. ಪಿಡಿಒಗಳು ಕೂಡ ಗ್ರಾಮಗಳಲ್ಲಿ ಸಮರ್ಪಕವಾಗಿ ನೀರು ಸರಬರಾಜು ಆಗುವಂತೆ ನಿಗಾವಹಿಸಬೇಕೆಂದು ಸಿಇಒ ಸೂಚಿಸಿದರು.

ಮುಸಲಾಪುರ ಗ್ರಾ.ಪಂ ವ್ಯಾಪ್ತಿಯ ರಾಂಪುರ ಕೆರೆಗೆ ಭೇಟಿ ನೀಡಿ, ಕೆರೆಯು ಸಂಪೂರ್ಣ ಬತ್ತಿರುವುದನ್ನು ಕಂಡು, ಕೆರೆಗೆ ನೀರು ತುಂಬಿಸಲು ಎಂಐ ವಿಭಾಗದ ಅಧಿಕಾರಿಗಳಿಗೆ ದೂರವಾಣಿ ಮೂಲಕ ಸೂಚನೆ ನೀಡಿದರು.