ಜಿಲ್ಲೆ

ಸರ್ಕಾರಿ ಪದವಿ ಕಾಲೇಜಿಗೆ ಬಿ+ ಗ್ರೇಡ್ ಮಾನ್ಯತೆ

ಕನಕಗಿರಿ: ಸ್ಥಳೀಯ ಶ್ರೀ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ನ್ಯಾಕ್ ಕಮಿಟಿಯು ಬಿ+ ಗ್ರೇಡ್ ನೀಡಿದೆ. ನ್ಯಾಕ್ ಸಮಿತಿಯ ಮುಖ್ಯಸ್ಥ ರಾಕೇಶ್ ಚಂದ್ರ ಕಟಿಯಾರ, ಸದಸ್ಯ ಕಾರ್ಯದರ್ಶಿ ಡಾ.ಪ್ರಣಬ್ ಕುಮಾರ್ ಮಿಶ್ರಾ ತಂಡವು ಫೆ.15 ಮತ್ತು 16ರಂದು ಕಾಲೇಜಿಗೆ ಭೇಟಿ ನೀಡಿ ಶೈಕ್ಷಣಿಕ ಪ್ರಗತಿ, ವಿದ್ಯಾರ್ಥಿಗಳ ಫಲಿತಾಂಶ ಮತ್ತು ಮೂಲಸೌಲಭ್ಯಗಳನ್ನು ಪರಿಶೀಲಿಸಿತ್ತು. ಸೋಮವಾರ ಬಿ+ ಗ್ರೇಡ್ ನೀಡಿ ಕಾಲೇಜಿಗೆ ಪತ್ರ ರವಾನಿಸಿದೆ. ಕಾಲೇಜಿಗೆ ಬಿ+ ಮಾನ್ಯತೆ ದೊರೆಯಲು ಶಾಸಕರು, ಹಳೆಯ ವಿದ್ಯಾರ್ಥಿಗಳ ಜತೆ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರ ಶ್ರಮವೂ ಕಾರಣ ಎಂದು ಪ್ರಾಚಾರ್ಯ ಸರ್ಫರಾಜ್ ಅಹ್ಮದ್ ತಿಳಿಸಿದರು.