ಕನಕಗಿರಿ ತಾಲೂಕಿನ ಜೀರಾಳ ಗ್ರಾಮದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಸಚಿವ ಶಿವರಾಜ ತಂಗಡಗಿ ಭೂಮಿಪೂಜೆ ನೆರವೇರಿಸಿದರು. ಪಿಐ ಎಂ.ಡಿ ಫೈಜುಲ್ಲಾ, ಎಇಇ ವಿಜಯಕುಮಾರ, ತಾ.ಪಂ ಇಒ ಟಿ.ರಾಜಶೇಖರ, ಜಿಲ್ಲಾ ಕೆಡಿಪಿ ಸದಸ್ಯ ನಾಗಪ್ಪ ಹುಗ್ಗಿ, ಪ್ರಮುಖರಾದ ಸಿದ್ದಪ್ಪ ನಿರ್ಲೂಟಿ, ಬೆಟ್ಟಪ್ಪ ಜೀರಾಳ, ನಿರುಪಾದೆಪ್ಪ ಸಿರವಾರ, ಶರಣಪ್ಪ ಸೋಮಸಾಗರ ಇತರರಿದ್ದರು.  
ಜಿಲ್ಲೆ

ನೀರು ಪೂರೈಸಲು 27.89ಕೋಟಿ ರೂ. ಮಂಜೂರು

ಕನಕಗಿರಿ: ಕ್ಷೇತ್ರದ ನಾನಾ ಕಡೆಗಳಲ್ಲಿ 36ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಭಾನುವಾರ ಭೂಮಿಪೂಜೆ ನೆರವೇರಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆ ಜೆಜೆಎಂ ಹಾಗೂ ಬಹುಗ್ರಾಮ ಕುಡಿವ ನೀರಿನ ಯೋಜನೆಯಡಿ 18 ಗ್ರಾಮಗಳಿಗೆ ನೀರು ಪೂರೈಸಲು 27.89ಕೋಟಿ ರೂ. ಮಂಜೂರಾಗಿದೆ. 20 ಎಕರೆ ಪ್ರದೇಶದಲ್ಲಿ ವಿಶಾಲವಾದ ಕೆರೆ ನಿರ್ಮಿಸಿ. ಇದರಿಂದ ಹಲವು ಗ್ರಾಮಗಳಿಗೆ ನೀರು ಸರಬರಾಜುಗೊಳಿಸಲಾಗುವುದು.

ಈ ಕಾಮಗಾರಿ ಪೂರ್ಣಗೊಂಡ ನಂತರ ಇನ್ನುಳಿದ 70 ಎಕರೆ ಪ್ರದೇಶ(ಸಣ್ಣ ಕೆರೆ)ದಲ್ಲಿ ನೀರು ತುಂಬಿಸಲು ಕ್ರಮ ಕೈಗೊಳ್ಳಲಾಗುವುದು. ಈ ಕಾರ್ಯಕ್ರಮ ಒಂದು ವರ್ಷವಾದರೂ ಕಾಲಾವಕಾಶ ತೆಗೆದುಕೊಳ್ಳಲಿದೆ ಎಂದರು.