ಕನಕಗಿರಿಯ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಮೇಲ್ವಿಚಾರಕ ತುಗ್ಲೆಪ್ಪ ದೇಸಾಯಿ ಶುಕ್ರವಾರ ಲೇಖನ ಸಾಮಗ್ರಿ ವಿತರಿಸಿದರು. ನೌಕರ ಮುನಿಸ್ವಾಮಿ ಇದ್ದರು.  
ಜಿಲ್ಲೆ

ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿ ವಿತರಣೆ

ಕನಕಗಿರಿ: ಪಟ್ಟಣದ 8ನೇ ವಾರ್ಡ್‌ನ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಶುಕ್ರವಾರ ಲೇಖನ ಸಾಮಗ್ರಿ ವಿತರಿಸಲಾಯಿತು.

6ರಿಂದ 10ನೇ ತರಗತಿವರೆಗೆ ವಸತಿ ನಿಲಯದಲ್ಲಿ ಒಟ್ಟು 225 ವಿದ್ಯಾರ್ಥಿಗಳಿದ್ದು, ತರಗತಿವಾರು ನೋಟ್‌ಬುಕ್ ಸಹಿತ ಕಂಪಾಸ್, ಉತ್ತರ ಪತ್ರಿಕೆಗಳು, ಪೆನ್ಸಿಲ್, ಪೆನ್‌ಗಳನ್ನು ವಿತರಿಸಲಾಗಿದೆ.

10ನೇ ತರಗತಿಗೆ ಕಿಂಗ್ ಸೈಜ್-ಲಾಂಗ್ ಸೈಜ್ ಸೇರಿ 10, 9ನೇ ತಗರತಿಗೆ 9, 8ನೇ ತರಗತಿಗೆ 8 ನೋಟ್‌ಬುಕ್‌ಗಳನ್ನು ವಿತರಿಸಲಾಗಿದೆ. 6 ಹಾಗೂ 7ನೇ ತಗರತಿಗೆ ಕಿಂಗ್ ಸೈಜ್ ನೋಟ್‌ಬುಕ್‌ಗಳನ್ನು ನೀಡಲಾಗಿದೆ ಎಂದು ವಸತಿ ನಿಲಯದ ಮೇಲ್ವಿಚಾರಕ ತುಗ್ಲೆಪ್ಪ ದೇಸಾಯಿ ತಿಳಿಸಿದರು. ನೌಕರ ಮುನಿಸ್ವಾಮಿ ಇತರರಿದ್ದರು.