ಕನಕಗಿರಿಯ 1ನೇ ವಾರ್ಡ್‌ನಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ಸೋಮವಾರ ಗುತ್ತಿಗೆ ನೌಕರರ ಸಭೆ ನಡೆಯಿತು. ಜಿಲ್ಲಾಧ್ಯಕ್ಷ ಗ್ಯಾನೇಶ ಕಡಗದ, ತಾಲೂಕು ಅಧ್ಯಕ್ಷ ಕನಕರಾಯ ಡಗ್ಗಿ, ಕಾರ್ಯದರ್ಶಿ ತೊಂಡೆಪ್ಪ, ಉಪಾಧ್ಯಕ್ಷ ಜಗನ್ನಾಥ, ಮಲ್ಲಮ್ಮ, ಸಹ ಕಾರ್ಯದರ್ಶಿ ದೊಡ್ಡಪ್ಪ, ಲಕ್ಷ್ಮೀ, ಹನುಮೇಶ್, ಹೂವಮ್ಮ ಭಾಗವಹಿಸಿದ್ದರು.  
ಜಿಲ್ಲೆ

ಹಾಸ್ಟೆಲ್ ನೌಕರರಿಗೆ ಕನಿಷ್ಠ ವೇತನ ಜಾರಿಯಾಗಲಿ

ಕನಕಗಿರಿ: ಸಮಾಜ ಕಲ್ಯಾಣ ಇಲಾಖೆ, ಬಿಸಿಎಂ, ಅಲ್ಪಸಂಖ್ಯಾತರ ಇಲಾಖೆ ಹಾಗೂ ಮುರಾರ್ಜಿ ದೇಸಾಯಿ ವಸತಿ ನಿಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ಕನಿಷ್ಠ ವೇತನ ಜಾರಿ ಮಾಡಬೇಕು ಎಂದು ವಸತಿ ನಿಲಯಗಳ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಗ್ಯಾನೇಶ ಕಡಗದ ಆಗ್ರಹಿಸಿದರು.

ಇಲ್ಲಿನ 1ನೇ ವಾರ್ಡ್‌ನಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಗುತ್ತಿಗೆ ನೌಕರರ ಸಭೆಯಲ್ಲಿ ಮಾತನಾಡಿದರು.

ರಾಜ್ಯ ಸರ್ಕಾರ ಈಗಾಗಲೇ ಕನಿಷ್ಠ ವೇತನದ ಅಧಿಸೂಚನೆ ಹೊರಡಿಸಿದ್ದು, ಎರಡು ತಿಂಗಳ ಕಾಲ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿದೆ. ಸರ್ಕಾರ ಗುತ್ತಿಗೆ ನೌಕರರ ಸಂಕಷ್ಟವನ್ನು ಪರಿಹರಿಸುವ ನಿಟ್ಟಿನಲ್ಲಿ ಯಥಾವತ್ತಾಗಿ ಕನಿಷ್ಠ ವೇತನ ಜಾರಿ ಮಾಡಬೇಕು. ಸುಮಾರು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ನೌಕರರಿಗೆ ಖಾಸಗಿ ಏಜೆನ್ಸಿಗಳಿಂದ ಮುಕ್ತಿ ದೊರೆಯಬೇಕಿದ್ದು, ಕಡಿಮೆ ಸಂಬಳದಲ್ಲಿ ಕೆಲಸ ಮಾಡುತ್ತಿರುವ ಡಿ-ಗ್ರೂಪ್ ನೌಕರರಿಗೆ ಭದ್ರತೆ ಇಲ್ಲದಂತಾಗಿದೆ. ರಾಜ್ಯಕ್ಕೆ ಮಾದರಿಯಾಗಿರುವ ಬೀದರ್‌ನ ಕಾರ್ಮಿಕರ ಸಹಕಾರ ಸೊಸೈಟಿಯನ್ನು ಡಿಸಿಗಳ ಅಧ್ಯಕ್ಷತೆಯಲ್ಲಿ ರಾಜ್ಯ ಸರ್ಕಾರ ರಚಿಸಬೇಕು. ಅಂದಾಗ ಸಿಬ್ಬಂದಿಗೆ ಪಿಎಫ್, ಇಎಸ್‌ಐ, ವೇತನ ಸರಿಯಾಗಿ ಬರುತ್ತದೆ. ವಾರದ ರಜೆ, ಹೆರಿಗೆ ರಜೆ, ಇಲಾಖೆಗಳಿಂದ ಸಿಗಬೇಕಾದ ಎಲ್ಲ ಸೌಲಭ್ಯ ಗಳು ಕೊಡಬೇಕೆಂದರು.